ಮಣಿಪುರ, ಜ 24 (DaijiworldNews/MS): ಮಣಿಪುರದಲ್ಲಿ ಭದ್ರತೆಗೆಂದು ನಿಯೋಜಿಸಲಾಗಿರುವ ಅಸ್ಸಾಂ ರೈಫಲ್ಸ್ ಪಡೆಯ ಸೈನಿಕನೊಬ್ಬ, ತನ್ನ ಆರು ಮಂದಿ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಬಳಿಕ ಮಣಿಪುರದಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡೇಟಿಗೆ ಒಳಗಾದ ಆರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಮಣಿಪುರದ ಮ್ಯಾನ್ಮಾರ್ ಗಡಿಯ ಬಳಿ ನಿಯೋಜಿಸಲಾದ ಅಸ್ಸಾಂ ರೈಫಲ್ಸ್ ಬೆಟಾಲಿಯನ್ನಲ್ಲಿ ಘಟನೆ ಸಂಭವಿಸಿದೆ .ದಂಗೆಕೋರರ ಪ್ರಮುಖ ಕೇಂದ್ರವಾಗಿರುವ ದೂರದ ಕುಗ್ರಾಮ ಪ್ರದೇಶಗಳಲ್ಲಿ ಇದು ಒಂದಾಗಿದೆ. ಅಸ್ಸಾಂ ರೈಫಲ್ಸ್-ಅರೆ ಸೇನಾ ಪಡೆಯಾಗಿದ್ದು, ಗಡಿಯಲ್ಲಿ ಕಾವಲು ಕಾಯುತ್ತದೆ.
ಇತ್ತೀಚೆಗಷ್ಟೇ ರಜೆ ಮುಗಿಸಿ ವಾಪಸ್ ಬಂದಿದ್ದ ಸೈನಿಕ. ರಾತ್ರಿ ವೇಳೆ ಆತ ಇದ್ದಕ್ಕಿದ್ದಂತೆ ತನ್ನ ಬಂದೂಕಿಗೆ ಗುಂಡು ತುಂಬಿಸಿಕೊಂಡು, ಸಹೋದ್ಯೋಗಿಗಳ ಮೇಲೆ ಹಾರಿಸಿದ್ದ. ಗಾಯಾಳುಗಳು ಮಣಿಪುರದವರಲ್ಲ. ಇವರನ್ನೆಲ್ಲಾ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣಿಪುರದಲ್ಲಿ ಈಗಾಗಲೇ ಗಲಾಟೆ ನಡೆಯುತ್ತಿರುವ ಕಾರಣ ಈ ಘಟನೆಯ ಬಗ್ಗೆ ವದಂತಿ ಹಬ್ಬದಂತೆ ತಡೆಯಲು ಮತ್ತು ಸತ್ಯಾಂಶ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.