ಚೆನ್ನೈ, ಜ 24 (DaijiworldNews/PC): ಸಾಧಿಸಬೇಕೆಂಬ ಹಠ ಹಾಗೂ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿನಂತೆ ತಮ್ಮ ತಾಯಿಯಿಂದಲೇ ಪ್ರೇರಣೆ ಪಡೆದು ಕಿರಿಯ ವಯಸ್ಸಿಯಲ್ಲಿ ಐಎಎಸ್ ಆದ ಐಶ್ವರ್ಯಾ ರಾಮನಾಥನ್ ರವರ ಸಾಧನೆಯ ಯಶೋಗಾಥೆ ಇದು.
ಐಶ್ವರ್ಯಾ ರಾಮನಾಥನ್ ನಮ್ಮ ದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಇವರು 2019 ರ UPSC ಪರೀಕ್ಷೆಯಲ್ಲಿ 47 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಆಗ ಐಶ್ವರ್ಯಾಗೆ 24 ವರ್ಷ. ಪ್ರಸ್ತುತ ಅವರು ತಮಿಳುನಾಡಿನ ತಿರುವಳ್ಳೂರಿನಲ್ಲಿ ಪೊನ್ನೇರಿ ಸಬ್-ಕಲೆಕ್ಟರ್ ಎಸ್ಡಿಎಂ ಆಗಿದ್ದಾರೆ.
ಐಎಎಸ್ ಅಧಿಕಾರಿಯಾಗುವುದು ತನ್ನ ಬಾಲ್ಯದ ಕನಸು, ಈ ಸ್ಥಾನಕ್ಕೆ ಬರಲು ನನ್ನ ತಾಯಿಯೇ ಸ್ಫೂರ್ತಿ ಎಂದು ಐಶ್ವರ್ಯಾ ಬಹಿರಂಗಪಡಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಮದುವೆಯಾಗಿ ನಂತರ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಆಕೆಯ ತಾಯಿ ಈಶ್ವರಯ್ಯನನ್ನು ಕಲೆಕ್ಟರ್ ಆಗಲು ಸದಾ ಪ್ರೋತ್ಸಾಹಿಸುತ್ತಿದ್ದರು.
ತಮಿಳುನಾಡಿನ, ಕೊಡಲೂರು ನಿವಾಸಿ ಯಾದ ಅವರು ಬಾಲ್ಯದಿಂದಲೂ ಪ್ರವಾಹ, ಬಿರುಗಾಳಿ ಮತ್ತು ಭಾರೀ ಮಳೆಯಂತಹ ಅನೇಕ ನೈಸರ್ಗಿಕ ವಿಕೋಪಗಳನ್ನು ನೋಡಿದ್ದರು. ಆದರೆ 2004 ರಲ್ಲಿ ಸಂಭವಿಸಿದ ಸುನಾಮಿ ನಾಶವು ಅವರ ಜೀವನವನ್ನು ಬದಲಾಯಿಸಿತು. ಈ ವೇಳೆ ಅಂದಿನ ಕಲೆಕ್ಟರ್ ಗಗನ್ ದೀಪ್ ಸಿಂಗ್ ಬೇಡಿ ಕೆಲಸ ಮಾಡುತ್ತಿದ್ದುದನ್ನು ಐಶ್ವರ್ಯಾ ನೋಡಿದ್ದರು. ಅವರಿಂದ ಇವರು ಪ್ರಭಾವಿತರಾಗಿದ್ದರು..ಹೀಗಾಗಿ ಕಾಲೇಜು ದಿನಗಳಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. 2017 ರಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆಸು IAS ಆಗಲು UPSC ಕೋಚಿಂಗ್ ತೆಗೆದುಕೊಂಡು ಅದೇ ವರ್ಷ ಮೊದಲ ಬಾರಿಗೆ ಯುಪಿಎಸಿ ಪರೀಕ್ಷೆ ಬರೆದಿದ್ದು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ 630ನೇ ರ್ಯಾಂಕ್ ಅನ್ನು ಪಡೆದರು. ಅದರಿಂದಾಗಿ ಅವರಿಗೆ ರೈಲ್ವೇ ಅಕೌಂಟ್ಸ್ ಸೇವೆಯಲ್ಲಿ ಕೆಲಸ ಸಿಕ್ಕಿತು. ಆದರೆ ಅವರ ಗುರಿ ಐಎಎಸ್ ಆಗುವುದಾಗಿತ್ತು ಆದ್ದರಿಂದ ಅವರು 2019 ರಲ್ಲಿ 2 ನೇ ಬಾರಿಗೆ ಪರೀಕ್ಷೆಯನ್ನು ಬರೆದು 47 ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿ ಐಎಎಸ್ ಆಗುವ ಕನಸು ನನಸಾಗಿಸಿಕೊಂಡರು.