ದಾವಣಗೆರೆ, ಜ 23(DaijiworldNews/PC): ಗಾಂಧಿಯವರು ಗುಂಡು ಹೊಡೆಸಿಕೊಂಡು ಸಾಯವಾಗಲು ಹೇ ರಾಮ್ ಎಂದು ಹೇಳಿ ಪ್ರಾಣ ಬಿಟ್ಟವರು. ಕಾಂಗ್ರೆಸ್ ಗೆ ರಾಮನ ಹೆಸರಲ್ಲಿ ರಾಜಕೀಯ ಮಾಡುವ ದಾರಿದ್ರ್ಯ ಪರಿಸ್ಥಿತಿ ಬಂದಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ರಾಮಭಕ್ತಳು. ನಾನೂ ಕೂಡ ಅಯೋಧ್ಯೆಗೆ ಹೋಗುತ್ತೇನೆ. ಮಹಾತ್ಮ ಗಾಂಧಿ ಬಗ್ಗೆ ಪ್ರಬಂಧ ಬರೆಯಲಿಕ್ಕೆ ಹೋದರೆ ಟೀಕೆಗಳು ಸಾಧ್ಯನಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಟೀಕೆ ಮಾಡ್ತಾರೆ ಎಂದರೆ ಅದಕ್ಕೆ ಅರ್ಥ ಇಲ್ಲ.
ಆ ರಾಮ ಈ ರಾಮ ಎನ್ನುವಂತಿಲ್ಲ ನಾವೆಲ್ಲ ರಾಮನ ಭಕ್ತರು ಎಂದರು.