ಬೆಂಗಳೂರು,ಜ 23(DaijiworldNews/PC): ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 16 ಶಾಲಾ ವಾಹನ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಅಭಿಯಾನದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 7 ರಿಂದ 9.30ರ ನಡುವೆ ಬೆಂಗಳೂರು ಸಂಚಾರ ಪೊಲೀಸರು 3,414 ಶಾಲಾ ವಾಹನ ಚಾಲಕರನ್ನು ಪರೀಕ್ಷಿಸಲಾಗಿದ್ದು ಈ ವೇಳೆ 16 ಶಾಲಾ ವಾಹನ ಚಾಲಕರು ಮದ್ಯ ಸೇವಿಸಿರುವುದು ಪತ್ತೆಯಾಗಿದೆ.
ಮಧ್ಯ ಸೇವಿಸಿದ್ದ ಚಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು ಮೋಟಾರು ವಾಹನ ಕಾಯ್ದೆ 185ರ ಅಡಿಯಲ್ಲಿ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಆಯಾ ಆರ್ಟಿಒಗಳಿಗೆ ಕಳುಹಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಹೇಳಿದರು.