ಚಿತ್ರದುರ್ಗ, ಜ 23(DaijiworldNews/PC): ರಾಮನನ್ನು ಬೀದಿ ಬೀದಿಯಲ್ಲಿ ಬಿಜೆಪಿಯವರು ಆಟ ಆಡಿಸಿದ್ದಾರೆ ಅವರಿಗೆ ನಿಜವಾಗಲೂ ರಾಮನ ಶಾಪ ತಟ್ಟಲಿದೆ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ನಮ್ಮ ಹಣೆಬರಹದಲ್ಲಿ ಯಾವಾಗ ಬರೆದಿರುತ್ತದೆ ಆಗ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡುತ್ತೇವೆ.
ಅಯೋಧ್ಯೆಗೆ ಹೋಗಿರದ ಬಿಜೆಪಿಯವರು ರಾಮದ್ರೋಹಿಗಳಾ ಎಂದು ಪ್ರಶ್ನಿಸಿದರು.
ದೇಶದ ದೊಡ್ಡ ದೊಡ್ಡ ಮನುಷ್ಯರನ್ನು ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿ ನೆನೆದು ಕೈಮುಗಿದು ನಮಃ ಶಿವಾಯ ಅಂತಾ ಹೇಳಿದ್ದಾರೆ ಎಂದರು.
ಅಂಬೇಡ್ಕರ್ ಅವರ ಸಂವಿಧಾನವೇ ನಮ್ಮ ದೇಶದ ದೇವರು. ಮನೆತನಕ್ಕೆ ಮತ್ತು ಪಕ್ಷಕ್ಕೆ ದೇವರನ್ನು ಅಡ ಇಡಬಾರದು. ನೀವು ರಾಮನ ಭಕ್ತರು ಎಂದರೆ ಬೇರೆಯವರು ವಿರೋಧವೇ ಎಂದು ಪ್ರಶ್ನಿಸಿದರು. ನಾವು ಎಲ್ಲಾ ಧರ್ಮ ಮತ್ತು ಎಲ್ಲಾ ದೇವರ ಭಕ್ತರು ಎಂದು ಹೇಳಿದರು