ಗುಜರಾತ್, ಜ 23(DaijiworldNews/RA): ಮೂರು ಹೊಸ ಕ್ರಿಮಿನಲ್ ಕಾನೂನುಗಳ ಮಹತ್ವವನ್ನು ಒತ್ತಿ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 5 ವರ್ಷಗಳ ನಂತರ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ ಎಂದು ಹೇಳಿದ್ದಾರೆ.
ಗುಜರಾತ್ ನ ರಾಷ್ಟ್ರೀಯ ಫೋರೆನ್ಸಿಕ್ ಸೈನಸ್ಸ್ ವಿಶ್ವವಿದ್ಯಾಲಯದ 5ನೇ ಅಂತರಾಷ್ಟ್ರೀಯ ಮತ್ತು 44 ನೇ ಅಪರಾಧಶಾಸ್ತೃ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವ್ಯವಸ್ಥೆಯು ಹೊಸ ಯುಗವನ್ನು ಪ್ರವೇಶಿಸುತ್ತಿರುವ ಸಮಯದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದೆ ಎಂದರು.
ಇನ್ನು ಈ ಹಿಂದೆ ಇದ್ದ ಐಪಿಸಿ,ಸಿಆರ್ ಪಿಸಿ ಮತ್ತು ಸಾಕ್ಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.ಅದರ ಬದಲಿಗೆ ಹೊಸ ಕಾನೂನುಗಳನ್ನು ಪರಿಚಯಿಸಲಾಗಿದೆ. ಈ ಹೊಸ ಕಾನೂನಿನಲ್ಲಿ ಅಪರಾಧ ಸ್ಥಳಗಳಲ್ಲಿ ವಿಧಿ ವಿಜ್ಞಾನ ಅಧಿಕಾರಿಗಳ ಭೇಟಿಯನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ 7 ಅಥವಾ ಅದಕ್ಕಿಂತ ಹಿಂದಿನ ಅಪರಾಧದ ಬಗ್ಗೆ ಕಾನೂನಿನಲ್ಲಿ ತನಿಖೆ ನಡೆಸಲು ಸುಲಭವಾಗುತ್ತದೆ. ಇದರಿಂದ ನ್ಯಾಯಾಧೀಶರ ಕೆಲಸವು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.