ನವದೆಹಲಿ, ಜ 23(DaijiworldNews/SK): ಯುಪಿಎಸ್ಸಿ ಪರೀಕ್ಷೆಯು ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದ್ದು, ಬಹುತೇಕ ಮಂದಿ ಈ ಪರೀಕ್ಷೆಯನ್ನು ಎದುರಿಸುತ್ತಾರೆ. ಒಂದು ಬಾರಿ ಪರೀಕ್ಷೆಯಲ್ಲಿ ವಿಫಲರಾದರಂತೂ ಮರು ಪರೀಕ್ಷೆಯನ್ನು ಬರೆಯುವ ಆಲೋಚನೆಯನ್ನು ಕೈಬಿಡುತ್ತಾರೆ. ಆದರೆ ಇಲ್ಲೊಬ್ಬರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಐದು ಬಾರಿ ವಿಫಲರಾದರು ಛಲ ಬಿಡದೆ ಆರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇದು ಐಎಎಸ್ ಅಧಿಕಾರಿಯಾದ ಪ್ರಿಯಾಂಕಾ ಗೋಯಲ್ ಯಶೋಗಾಥೆ.
ನವದೆಹಲಿಯಲ್ಲಿ ಹುಟ್ಟಿ ಬೆಳೆದ ಪ್ರಿಯಾಂಕಾ ಗೋಯೆಲ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೇಶವ್ ಮಹಾವಿದ್ಯಾಲದಲ್ಲಿ ಪೂರ್ಣಗೊಳಿಸಿದರು. ನಂತರ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡರು.
ಇನ್ನು ಬಾಲ್ಯದಿಂದಲೇ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಪ್ರಿಯಾಂಕಾ ಅವರು, ಪದವಿ ಶಿಕ್ಷಣ ಪೂರ್ಣಗೊಳಿಸಿದ ತಕ್ಷಣ UPSC ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಾದರು.
ಆರಂಭಿಕ ಹಂತದಲ್ಲಿ UPSC ಪಠ್ಯಕ್ರಮದ ಸಮಗ್ರ ಜ್ಞಾನವನ್ನು ಹೊಂದಿರದ ಪ್ರಿಯಾಂಕಾ ಗೋಯೆಲ್ ಅವರು ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಅನ್ನು ತೆರವುಗೊಳಿಸುವಲ್ಲಿ ವಿಫಲರಾದರು. ಹೀಗೆ ಎರಡನೇ ಪ್ರಯತ್ನದಲ್ಲಿ ಕೇವಲ 0.7 ಅಂಕಗಳನ್ನು ಕಳೆದುಕೊಂಡು ಕಟ್-ಆಫ್ ಪಟ್ಟಿಯಲ್ಲಿ ಸ್ಥಾನವನ್ನು ಕಳೆದುಕೊಂಡರು. ಆದರೂ ಛಲ ಬೀಡದ ಅವರು ಮತ್ತೆ ಪರೀಕ್ಷೆ ಬರೆಯಲು ಮುಂದಾದರೂ.
ಪ್ರಿಯಾಂಕಾ ಗೋಯೆಲ್ ಅವರಿಗೆ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದು ಅವರ ಬಾಲ್ಯದ ಕನಸಾಗಿತ್ತು. ಆದರೆ ಈ ಗುರಿಯನ್ನು ಸಾಧಿಸಲು ಆಕೆಗೆ ವರ್ಷಗಳೇ ಬೇಕಾಯಿತು. ಹಲವಾರು ಹಿನ್ನಡೆಗಳನ್ನು ಅನುಭವಿಸಿದ ನಂತರವೂ, ಪ್ರಿಯಾಂಕಾ ಪಟ್ಟುಬಿಡದೇ ಸತತ ಐದು ಸೋಲುಗಳ ನಂತರ ತಮ್ಮ ಕಠಿಣ ಪರಿಶ್ರಮದ ಫಲವಾಗಿ 6ನೇ ಪ್ರಯತ್ನದಲ್ಲಿ 2022 ರಲ್ಲಿ UPSC ಅನ್ನು ಉತ್ತೀರ್ಣರಾಗುವ ಮೂಲಕ 369 ನೇ ಅಖಿಲ ಭಾರತ ಶ್ರೇಣಿಯನ್ನು (AIR) ಪಡೆದುಕೊಂಡರು.
ಈ ಮೂಲಕ ಜೀವನದಲ್ಲಿ ಅದೆಷ್ಟು ಅಡೆತಡೆಗಳು ಎದುರಾದರು ಅದನ್ನು ಮೆಟ್ಟಿ ನಿಂತು ಛಲದಿಂದ ಎದುರಿಸಿದರೆ ಮಾತ್ರ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎನ್ನುವುದಕ್ಕೆ ಪ್ರಿಯಾಂಕಾ ಗೋಯಲ್ ಉದಾಹರಣೆಯಾಗಿದ್ದಾರೆ.