ಬೆಂಗಳೂರು, ಜ 22 (DaijiworldNews/ AK): ರಾಮ ಮಂದಿರ ಪೂಜೆಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಇದರ ಕುರಿತು ಎಲ್ಲರಿಗೂ ಜಾಣ ಮರೆವು ಯಾಕೆ ಎಂದು ಈ ವೇಳೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲದೇ 1985 ರಲ್ಲಿ ರಾಜೀವ್ ಗಾಂಧಿ ಅಯೋಧ್ಯೆ ರಾಮಮಂದಿರದ ಬಾಗಿಲು ತೆಗೆಸಿದ್ದರು ಎಂದು ಹೇಳಿದರು.
ರಾಮಾಯಣ ನಡೆದು ಐದಾರು ಸಾವಿರ ವರ್ಷಗಳಾಯಿತು. ಇಷ್ಟು ವರ್ಷಗಳಲ್ಲಿ ಲಕ್ಷಾಂತರ ದೇವಸ್ಥಾನದ ನಿರ್ಮಾಣವಾಗಿದೆ. ಶ್ರೀರಾಮ ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದರು.
ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಸೂಚನೆ ನೀಡಿದ್ದೆವು. ಬಿಜೆಪಿ ನಾಯಕರು ಹೇಳದೆಯೇ ಪೂಜೆಗೆ ಆದೇಶ ನೀಡಿದ್ದೇವೆ ಎಂದರು.
ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ದಿನ ಎದ್ದು ಪೂಜೆ ಮಾಡಿ ಬರುತ್ತೇವೆ. ಅದನ್ನ ಅವರಿಂದ ಕಲಿಯಬೇಕಾಗಿಲ್ಲ. ನಮ್ಮಿಂದಲೇ ಅವರು ಕಲಿಯಬೇಕು ಎಂದು ಕಿಡಿಕಾರಿದು.