ಗುವಾಹತಿ, ಜ 21(DaijiworldNews/SK): ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ ಅಸ್ಸಾಂನ ಸೋನಿತ್ಪುರದಲ್ಲಿ ಜ. 21 ರಂದು ಪಕ್ಷದ ನಾಯಕ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ದಾಳಿ ನಡೆದ್ದಿತ್ತು. ಈ ದಾಳಿಯನ್ನು ಬಿಜೆಪಿಯ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಇದೀಗ ಈ ಕುರಿತಾಗಿ ಸ್ವತಃ ಜೈರಾಮ್ ರಮೇಶ್ 'ಟ್ವಿಟರ್'ನಲ್ಲಿ ವಿಡಿಯೋ ಮುಖಾಂತರ ವಿವರಣೆ ನೀಡಿದ್ದಾರೆ.
'ಸೊನೀತ್ಪುರದ ಜಮುಗುರಿಘಾಟ್ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯಯಾತ್ರೆಯಲ್ಲಿ ನಾನು ಭಾಗಿಯಾಗಿದ್ದೆ. ಈ ವೇಳೆ ನನ್ನ ವಾಹನದ ಮೇಲೆ ಬಿಜೆಪಿಯ ಗುಂಪು ದಾಳಿ ನಡೆಸಿದೆ. ಕಾರಿನ ವಿಂಡ್ಶೀಲ್ಡ್ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆಯ ಸ್ಟಿಕ್ಕರ್ಗಳನ್ನು ಹರಿದು ಹಾಕಿದಲ್ಲದೇ ನೀರನ್ನು ಎಸೆದು ನ್ಯಾಯ ಯಾತ್ರೆಯ ವಿರುದ್ಧ ಘೋಷಣೆ ಕೂಗಲಾಗಿದೆ.
ಪ್ರಮುಖವಾಗಿ ಈ ಕೃತ್ಯದ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕೈವಾಡ ಅಡಗಿದೆ. ಆದರೆ ಈ ದಾಳಿ ನಡೆಯುವ ವೇಳೆ ನಾವು ತಾಳ್ಮೆಯನ್ನು ಕಳೆದುಕೊಳ್ಳದೇ ಈ ಯಾತ್ರೆಯನ್ನು ಮುಂದುವರಿಸಿದ್ದೇವೆ. ಇನ್ನು ಬಿಜೆಪಿಯವರ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದರು.