ಶಿಮ್ಲಾ, ಜ 21 (DaijiworldNews/AK):ಜ. 22 ರಂದು ನಾಳೆ ನಡೆಯುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಂದು ಹಿಮಾಚಲ ಪ್ರದೇಶ ಸರಕಾರ ಸಾರ್ವಜನಿಕ ರಜೆ ಘೋಷಿಸಿದೆ.
ರಾಜ್ಯದ ಎಲ್ಲ ಸರಕಾರಿ ನೌಕರರು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಶಾಲೆಗಳು, ಕಾಲೇಜುಗಳು, ವಿವಿಗಳು ಹಾಗೂ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರಕಾರ ಅರ್ಧ ದಿನ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಪ್ರಾಣ ಪ್ರತಿಷ್ಟಾಪನೆಯಂದು ಸಾರ್ವಜನಿಕ ರಜೆ ಘೋಷಿಸಿದ ಕಾಂಗ್ರೆಸ್ ನೇತೃತ್ವದ ಮೂರು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮೊದಲ ರಾಜ್ಯವಾಗಿದೆ.