ಭೋಪಾಲ್, ಜ 19(DaijiworldNews/AA): ವಿವಾದಿತ ರಾಮಲಲ್ಲಾನ ವಿಗ್ರಹವನ್ನು ನಾಶಪಡಿಸಿದ ವಿಗ್ರಹ ಎಲ್ಲಿದೆ? ಎರಡನೇ ಪ್ರತಿಮೆಯ ಅಗತ್ಯವೇನು? ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಮ ಮಂದಿರದ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ಗುರು ಶಂಕರಾಚಾರ್ಯ ಸ್ವಾಮಿ, ಸ್ವರೂಪಾನಂದ ಜಿ ಮಹಾರಾಜ್ ಕೂಡ ರಾಮನ ವಿಗ್ರಹವನ್ನು ಸ್ಥಾಪಿಸಲು ಸಲಹೆ ನೀಡಿದ್ದರು. ರಾಮಜನ್ಮಭೂಮಿ ಮಂದಿರವು ಮಗುವಿನ ರೂಪದಲ್ಲಿ ಇರಬೇಕು. ತಾಯಿ ಕೌಶಲ್ಯೆಯ ಮಡಿಲಲ್ಲಿ ಇರಬೇಕು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣಿಸುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಈ ರೀತಿಯಾಗಿ ಪೋಸ್ಟ್ ಮಾಡುತ್ತಿದ್ದಂತೆ ಅವರ ವಿರುದ್ಧ ಬಿಜೆಪಿಗರು ಹಾಗೂ ರಾಮನ ಭಕ್ತರು ಕಿಡಿಕಾರಿದ್ದಾರೆ. ಇನ್ನು ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.