ಲಕ್ನೋ, ಜ 19 (DaijiworldNews/HR): ಸಮಾಜವಾದಿ ಪಕ್ಷವು ಲೋಕಸಭಾ ಚುನಾವಣೆಗೆ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ದೊಂದಿಗೆ ಮೈತ್ರಿ ಮಾಡಿಕೊಡಿರುವುದನ್ನು ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಅಖಿಲೇಶ್ ಮತ್ತು ಜಯಂತ್ ಅವರು ಮಹತ್ವದ ಮಾತುಕತೆಯ ಬಳಿಕ ಮೈತ್ರಿಯನ್ನು ಘೋಷಿಸಿದ್ದಾರೆ.
ಮೈತ್ರಿ ಘೋಷಣೆಗೂ ಮುನ್ನ I.N.D.I. ಮೈತ್ರಿ ಕೂಟದ ಕಾರ್ಯತಂತ್ರದ ಭಾಗವಾಗಿ ಕಾಂಗ್ರೆಸ್ ನಾಯಕರು ಅಖಿಲೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಇನ್ನು ರಾಷ್ಟ್ರೀಯ ಲೋಕದಳವು ಉತ್ತರಪ್ರದೇಶದಲ್ಲಿ 80 ಸೀಟುಗಳ ಪೈಕಿ 7 ರಿಂದ 8 ಸೀಟುಗಳಲ್ಲಿ ಸ್ಪರ್ಧಿಸಲಿದೆ.