ನವದೆಹಲಿ, ಅಯೋಧ್ಯೆ, ಜ 19 (DaijiworldNews/ AK): ಟಿಎಂಸಿ ನಾಯಕಿ ಮತ್ತು ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರು ತಮಗೆ ಕೊಟ್ಟಿದ್ದ ನವದೆಹಲಿಯ 9 ಬಿ ಟೆಲಿಗ್ರಾಫ್ ಲೇನ್ನಲ್ಲಿರುವ ಸರ್ಕಾರಿ ಬಂಗಾಲೆಯನ್ನು ಇಂದು ಬೆಳಗ್ಗೆ 10 ಗಂಟೆಗೆ ಖಾಲಿ ಮಾಡಿದ್ದಾರೆ.
ಗುರುವಾರ ದೆಹಲಿ ಹೈಕೋರ್ಟ್ ಉಚ್ಚಾಟನೆ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದಾದ ಮರುದಿನವೇ ಬಂಗಲೆ ಖಾಲಿ ಮಾಡಲು ಎಸ್ಟೇಟ್ ನಿರ್ದೇಶನಾಲಯ ತಂಡವನ್ನು ಕಳುಹಿಸಲು ನಿರ್ಧರಿಸಿತ್ತು. ಆದರೆ ಅದಕ್ಕೂ ಮೊದಲೇ ಮಾಜಿ ಸಂಸದೆ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಮೊಯಿತ್ರಾ ಪರ ವಕೀಲ ಶಾದನ್ ಫರಾಸತ್ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಬಂಗಲೆಯನ್ನು ತೆರವು ಮಾಡುವ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಒತ್ತಾಯಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಇದಕ್ಕೂ ಮುನ್ನ ಬುಧವಾರ ಮೊಯಿತ್ರಾ ಅವರು ನವದೆಹಲಿಯಲ್ಲಿ ಸರ್ಕಾರ ಮಂಜೂರು ಮಾಡಿದ ನಿವಾಸವನ್ನು ಖಾಲಿ ಮಾಡುವಂತೆ ಹೊಸ ನೋಟಿಸ್ ಸ್ವೀಕರಿಸಿದ್ದರು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇ ಟ್ ನಿರ್ದೇಶನಾಲಯವು ಮಹುವಾ ಮೊಯಿತ್ರಾ ಅವರಿಗೆ ಲೋಕಸಬೆಯಿಂದ ಉಚ್ಚಾಡಿಸಿದ ಬಳಿಕ ತಲಾ ಮೂರು ನೋಟಿಸ್ ಕಳುಹಿಸಿದೆ.
ಈ ಮಧ್ಯೆ ಅರೋಗ್ಯ ಸಮಸ್ಯೆಯ ಕಾರಣ ಬಂಗಲೆಯನ್ನು ಖಾಲಿ ಮಾಡುವಂತೆ ನೀಡಿದ್ದ ನೊಟೀಸ್ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿದ್ದರು.ಆದರೆ ನ್ಯಾಯಾಲಯ ಮೊಯಿತ್ರಾ ಅವರ ಮನವಿಯನ್ನು ತಿರಸ್ಕರಿಸಿತ್ತು.