ಶಿವಮೊಗ್ಗ, ಜ 19 (DaijiworldNews/HR): ಕರ್ನಾಟಕದ ಜನರು ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಮನೆಯಿಂದಲೇ ಕೂತು ನೋಡಲಿ. ಹಾಗಾಗಿ 22 ರಂದು ರಜೆ ಘೋಷಣೆ ಮಾಡಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ದಿನ ನೀವು ಟೀಕೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಾರ್ಥನೆ ಮಾಡುತ್ತೇನೆ ಎಂದರು.
ಇನ್ನು ಅನಂತ್ ಕುಮಾರ್ ಹೆಗಡೆ ಒಬ್ಬ ದೇಶ ಭಕ್ತ, ದೈವ ಭಕ್ತ. ಆದರೆ ನಾಲ್ಕೈದು ದಿನ ಟೀಕೆ ಮಾಡುವುದು ಬೇಡ ಎಂದು ಅವರಿಗೂ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.