ಅಯೋಧ್ಯೆ, ಜ.18 (DaijiworldNews/AK): ಪ್ರಾಣ ಪ್ರತಿಷ್ಠೆಗೂ ಮುನ್ನ ರಾಮ ಮಂದಿರದ ಗರ್ಭ ಗುಡಿಯೊಳಗೆ ಶ್ರೀ ರಾಮನಮೂರ್ತಿಯನ್ನು ತರಲಾಯಿತು. ಬುಧವಾರ ರಾತ್ರಿ ಕ್ರೇನ್ ಮೂಲಕ ಮೂರ್ತಿ ಯನ್ನು ಗರ್ಭ ಗುಡಿಯೊಳಗೆ ತರಲಾಯಿತು.ಈ ವೇಳೆ ವಿಶೇಷ ಪೂಜೆಗಳು ನಡೆಯಲಿದೆ ಎಂದು ವರದಿಯಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಕೆತ್ತಿರುವ ಕಪ್ಪು ಶಿಲೆಯಮೂರ್ತಿ ಯನ್ನು ಗರ್ಭ ಗುಡಿಯೊಳಗೆ ತರಲಾಯಿತು. 150–200 ಕೆ.ಜಿ ತೂಕದ
ಈ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ ಟ್ರಕ್ ಮೂಲಕ ಮೆರವಣಿಗೆಯಲ್ಲಿ ದೇಗುಲದ ಆವರಣಕ್ಕೆ ತರಲಾಯಿತು.
ಇಂದು ಮೂರ್ತಿಯ ಪ್ರತಿಷ್ಠಾಪನೆ ನಡೆಯುವ ಸಂಭವವಿದೆ ಎಂದು ಮಂದಿರ ನಿರ್ಮಾ ಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಜ.22 ರಂ ದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಜ.23 ರಿಂ ದ ಸಾರ್ವ ಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.