ಬೆಂಗಳೂರು:ಜ 16 (DaijiworldNews/AK): ಬಿಜೆಪಿ ಅವರು ಹೇಳಿದಂತೆ ನಾವು ಕೇಳಿದ್ರೆ ಆಡಳಿತ ಮಾಡೋಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಹಾವೇರಿ ರೇಪ್ ಕೇಸ್ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತನಿಖೆ ಆಗುತ್ತಿದೆ. ಸಂಪೂರ್ಣ ತನಿಖೆ ಆಗಲಿ. ಅಲ್ಲಿಯವರೆಗೂ ನಾನೇನು ಹೇಳಲ್ಲ. ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ಪೆಕ್ಟರ್ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದು ಹೇಳಿದರು.
ಎಸ್ಐಟಿ ತನಿಖೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಬಿಜೆಪಿ ಎಸ್ಐಟಿ, ಸಿಬಿಐ, ಸಿಒಡಿ ಎಲ್ಲಾ ಮಾಡಿ ಅಂತ ಹೇಳುತ್ತಾರೆ. ಅವರು ಹೇಳಿದ್ದೆಲ್ಲಾ ಮಾಡಿಕೊಂಡು ಕೂತರೇ ಆಡಳಿತ ನಡೆಸೋಕೆ ಆಗುತ್ತಾ? ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಹೇಳಿದಾಗ ಅವರೇನು ಕೇಳಿದ್ರಾ? ಅವರೇನು ನಮ್ಮನ್ನು ಕೇಳಿ ಆಡಳಿತ ಮಾಡಿದ್ರಾ? ಎಂದು ಪ್ರಶ್ನಿಸಿದರು.
ನಾವು ಜನರಿಗೆ ಜನಪರ ಆಡಳಿತ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೇವೆ. ಆ ಕೆಲಸ ನಾವು ಮಾಡುತ್ತೇವೆ ಎಂದು ತಿಳಿಸಿದರು.