ಬೆಳಗಾವಿ, ಜ 14(DaijiworldNews/AK): ರಾಜ್ಯದ ಜನರಲ್ಲಿ ನಮ್ಮ ಸರಕಾರ ಎನ್ನುವ ಭಾ ವನೆ ಮೂಡಿದೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಯನ್ನೂ ತಲುಪಿವೆ ಎಂದರು.
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಒಂದಿಲ್ಲೊಂದು ಯೋಜನೆಗಳು ಎಲ್ಲರ ಮನೆಗಳನ್ನೂ ತಲುಪಿವೆ. ವಿದ್ಯುತ್ ಬಿಲ್ ಕಟ್ಟುವುದು ತಪ್ಪಿದೆ, ಮಹಿಳೆಯರು ಬಸ್ ಟಿಕೆಟ್ ಹಣ ಕೊಡುವುದು ನಿಂತಿದೆ.
ಗೃಹ ಲಕ್ಷ್ಮೀ ಮೂಲಕ ಗೃಹಿಣಿಯರಿಗೆ 2 ಸಾವಿರ ರೂ. ಬರುತ್ತಿದೆ. ಪಡಿತರ ಹಣ ಖಾತೆಗೆ ಜಮಾ ಆಗುತ್ತಿದೆ. ಈಗ ಯುವ ನಿಧಿ ಯೋಜನೆ ಜಾರಿಗೊಂಡಿದೆ ಎಂದು ತಿಳಿದರು.