ದಾವಣಗೆರೆ, ಜ.13 (DaijiworldNews/AK): ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದ್ದು ಈ ಕುರಿತು ಸ್ಪಷ್ಟ ನಿಲುವು ತೋರಬೇಕು. ಈಗಿನ ಕಾಂಗ್ರೆಸ್ನವರಿಗೆ ಶ್ರೀ ರಾಮ ಬೇಕೋ ಅಥವಾ ಬಾಬರ್ ಬೇಕೋ ಎಂಬ ಎರಡು ಆಯ್ಕೆಗಳು ಇವೆ.ಇದರಲ್ಲಿ ಯಾವುದು ಬೇಕು ಎಂಬದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತ ಬಾಬರ್ನನ್ನು ಬಿಟ್ಟು ಕೊಡಲಾಗದು. ಅತ್ತ ರಾಮನ ಜತೆ ನಿಂತುಕೊಳ್ಳಲೂ ಆಗಲ್ಲ ಎಂಬ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ.
ಕಾಂಗ್ರೆಸ್ ನವರಿಗೆ ಬಾಬರ್ ಮೇಲೆ ಆಸಕ್ತಿ ಇದ್ದರೆ ಅವರಿಗೆ ಈ ದೇಶದಲ್ಲಿ ಜಾಗವೇ ಇಲ್ಲ. ಏಕೆಂದರೆ ರಾಮನಿಲ್ಲದೇ ಈ ರಾಷ್ಟ್ರವೇ ಇಲ್ಲ. ರಾಮನಿಲ್ಲದ ಭಾರತ ಕಲ್ಪನೆ ಮಾಡಿಕೊಳ್ಳಲು ಸಹ ಆಗದು. ರಾಮ, ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಸಣ್ಣತನದ ರಾಜಕಾರಣ ನಿಲ್ಲಿಸಬೇಕು ಎಂದರು.