ಕೋಲ್ಕತಾ, ಜ 09 (DaijiworldNews/AK): ಪ್ರಾಸ್ಟೇ ಟ್ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಸಂಗೀತ ಮಾಂತ್ರಿಕ,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಉಸ್ತಾದ್ ರಶೀದ್ ಖಾನ್ ಮಂಗಳವಾರ ನಿಧನರಾಗಿದ್ದರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ತನ್ನ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಖಾನ್ ಅವರು ಕಳೆದ ಕೆಲ ದಿನಗಳಿಂದ ತುರ್ತು ಚಿಕಿತ್ಸಾ ಘಟಕದಲ್ಲಿದ್ದರು.ರಶೀದ್ ಖಾನ್ ಅವರ ನಿಧನಕ್ಕೆ ಸಂಗೀತ ಲೋಕದ ಅಪಾರ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ರಶೀದ್ ಖಾನ್ ಅವರು ಸುಮಾರು 3:45 ಕ್ಕೆ ಕೊನೆಯುಸಿರೆಳೆದರು ಎಂದು ಖಾಸಗಿ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಶೀದ್ ಖಾನ್ ಅವರು ತಮ್ಮ ತಾಯಿಯ ಅಜ್ಜ ಉಸ್ತಾದ್ ನಿಸ್ಸಾರ್ ಹುಸೇನ್ ಖಾನ್ ಅವರಿಂದ ಆರಂಭಿಕ ತರಬೇತಿಯನ್ನು ಪಡೆದಿದ್ದರು.ರಾಂಪುರ-ಸಹಸ್ವಾನ್ ಘರಾನಾ ಶೈಲಿಯ ಗಾಯಕರಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಸಂಗೀತದ ಅದ್ಭುತ ಕೊಡುಗೆಗಾಗಿ ಕೇಂದ್ರ ಸರಕಾರ 2006 ಪದ್ಮಶ್ರೀ, 2012 ರಲ್ಲಿ ಬಂಗಾ ಭೂಷಣ್, 2006 ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗ್ಲೋ ಬಲ್ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ , ಮಹಾ ಸಂಗೀತಸಮ್ಮಾನ್ ಪ್ರಶಸ್ತಿ , ಮಿರ್ಚಿ ಸಂಗೀತ ಪ್ರಶಸ್ತಿ, ಅತ್ಯುನ್ನತ ಪದ್ಮಭೂಷಣ (2022)ಪ್ರಶಸ್ತಿ ನೀಡಿ ಗೌರವಿಸಲಾಗಿದೆ.