ಬೆಂಗಳೂರು, ಏ 22 (Daijiworld News/MSP): ಏಪ್ರಿಲ್ ತಿಂಗಳ ಕೊನೆಯಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಈಗಾಗಲೇ ಬಹುತೇಕ ಅಂತಿಮ ಹಂತದಲ್ಲಿದ್ದು ಹೀಗಾಗಿ ಮಾಸಾಂತ್ಯದ ವೇಳೆ ಫಲಿತಾಂಶ ಹೊರಬೀಳುವುದು ನಿಚ್ಚಳವಾಗಿದೆ.
ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯವೂ ಎ.10ರಿಂದ 230 ಕೇಂದ್ರಗಳಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ಕಾಗಿ 77,754 ಮೌಲ್ಯಮಾಪಕರನ್ನು ನಿಯೋಜನೆ ಮಾಡಲಾಗಿತ್ತು. ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾಡಿ ಮುಗಿಯುತ್ತಲೇ ಅಂಕಗಳನ್ನು ಆನ್ಲೈನ್ ಪೋರ್ಟಿಂಗ್ ಮೂಲಕ ಭರ್ತಿ ಮಾಡುವುದರಿದ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ತಕ್ಷಣ ಫಲಿತಾಂಶ ಘೋಷಿಸುವ ಸಾಧ್ಯತೆ ಇದೆ.
ಸಿಇಟಿ ಪರೀಕ್ಷೆಗೆ ತೊಂದರೆ ಆಗದಂತೆ ಈ ತಿಂಗಳ ಕೊನೆಯಲ್ಲಿ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆ. ಮಾ. 21ರಿಂದ ಎ. 4ರ ವರೆಗೆ ನಡೆದ ಪರೀಕ್ಷೆಯಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 5,202 ಸರಕಾರಿ ಪ್ರೌಢಶಾಲೆ, 3,244 ಅನುದಾನಿತ, 6,004 ಅನುದಾನ ರಹಿತ ಸಹಿತ 14,450 ಪ್ರೌಢಶಾಲೆಗಳ 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.