ನವದೆಹಲಿ, ಜ 04 (DaijiworldNews/HR): ನಾನು ಲೋಕಸಭೆ ಚುನಾವಣೆಯಲ್ಲಿನಾನು ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿಯು ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಕೊಡಿಸುವ ಕೆಲಸ ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹೊಸ ಮದ್ಯನೀತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಬಿಜೆಪಿ ನನ್ನನ್ನು ಬಂಧಿಸಲು ಬಯಸುತ್ತದೆ. ನನ್ನ ದೊಡ್ಡ ಆಸ್ತಿ ನನ್ನ ಪ್ರಾಮಾಣಿಕತೆ ಮತ್ತು ಅವರು ಅದನ್ನು ನಾಶಮಾಡಲು ಬಯಸುತ್ತಾರೆ ಎಂದರು.
ಇನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಜಾರಿ ನಿರ್ದೇಶನಾಲಯದ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ನೀಡಿದ್ದು, ಮೂರನೇ ಸಮನ್ಸ್ ಬಳಿಕವೂ ವಿಚಾರಣೆಗೆ ಗೈರಾಗಿದ್ದಾರೆ.