ಕೇರಳ, ಜ 03 (DaijiworldNews/PC): ಲೂಟಿಗೆ ಕೇರಳದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬೇಕು ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಬಡವರಿಗೆ ಮತ್ತು ಮೂಲಸೌಕರ್ಯಕ್ಕೆ ಸಿಗುತ್ತಿರುವ ಹಣದ ಬಗ್ಗೆ ಯಾರೂ ಪ್ರಶ್ನಿಸುವುದು ಅವರಿಗೆ ಇಷ್ಟವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದರು.
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯದ ನಂತರ, ಎಲ್ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ‘ನಾರಿ ಶಕ್ತಿ’ಯನ್ನು ದುರ್ಬಲವೆಂದು ಪರಿಗಣಿಸಿದವು. ಅಲ್ಲದೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾನೂನನ್ನು ಅವರು ತಡೆಹಿಡಿದರು ಆದರೆ ಮೋದಿ ನಿಮಗೆ ನಿಮ್ಮ ಹಕ್ಕುಗಳನ್ನು ನೀಡುವ ಭರವಸೆ ನೀಡಿದರು ಮತ್ತು ಅದನ್ನು ಈಡೇರಿಸಿದ್ದೇನೆ ಎಂದರು.
ಇಂಡಿಯಾ ಮೈತ್ರಿ ಕೂಟವು ನಮ್ಮ ದೇವಸ್ಥಾನಗಳು ಮತ್ತು ಹಬ್ಬಗಳನ್ನು ಲೂಟಿಗೆ ದಾರಿಮಾಡಿಕೊಂಡಿದ್ದಾರೆ. ‘ತ್ರಿಶೂರ್ ಪೂರಂ’ನಲ್ಲಿ ನಡೆಯುತ್ತಿರುವ ರಾಜಕೀಯ ದುರದೃಷ್ಟಕರ. ಶಬರಿಮಲೆಯಲ್ಲಿ ನಡೆದಿರುವ ದುರಾಡಳಿತದಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಇಲ್ಲಿಯ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಎಂದು ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಸರ್ಕಾರ ಇರುವವರೆಗೂ ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಹೋದರಿಯರು ನರಳುತ್ತಿದ್ದರು. ಆದರೆ ಅದರಿಂದ ಮುಕ್ತಿ ನೀಡುವ ಭರವಸೆ ನೀಡಿ ಪ್ರಾಮಾಣಿಕವಾಗಿ ಈಡೇರಿಸಿರುವುದಾಗಿ ಅವರು ಹೇಳಿದರು.