ನವದೆಹಲಿ,ಏ20(Daijiworld News/AZM):ಜಿ.ಎಸ್.ಟಿ. ಸೇಲ್ಸ್ ರಿಟರ್ನ್ ಸಲ್ಲಿಕೆ ಅವಧಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ.
ಜಿ.ಎಸ್.ಟಿ.ಆರ್. 3 ಬಿ ರಿಟರ್ನ್ ಸಲ್ಲಿಕೆ ಅವಧಿಯನ್ನು ಈಗ ಏಪ್ರಿಲ್ 23 ರವರೆಗೆ ವಿಸ್ತರಿಸಲಾಗಿದ್ದು, ಜಿ.ಎಸ್.ಟಿ. ವೆಬ್ ಸೈಟ್ gst.gov.in ಮೂಲಕ ರಿಟರ್ನ್ ಸಲ್ಲಿಸಬಹುದಾಗಿದೆ.
ಈ ರಿಟರ್ನ್ ಸಲ್ಲಿಕೆ ಅವಧಿ ಏಪ್ರಿಲ್ 20 ಕ್ಕೆ ಕೊನೆಗೊಳ್ಳಬೇಕಿದ್ದು, ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ಅವಧಿಯನ್ನು ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ.