ಜ.01 (DaijiworldNews/PC): ಸಾಧಿಸಲೇಬೇಕೆಂಬ ಹಠ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದ ಯುವಕ ಯಲಗೂರೇಶ ಅರ್ಜುನ ನಾಯಕ ಸಾಕ್ಷಿಯಾಗಿದ್ದಾರೆ.
1 ರಿಂದ 5ನೇ ತರಗತಿ ವರೆಗೆ ಸರೂರ ತಾಂಡಾದ ಸರಕಾರಿ ಶಾಲೆಯಲ್ಲಿಯೇ ಓದಿರುವ ಯಲಗೂರೇಶ ನಾಯಕರವರು 6ನೇ ತರಗತಿಯಿಂದ 20ನೇ ತರಗತಿಯವರೆಗೆ ಮುದ್ದೇಬಿಹಾಳ ಪಟ್ಟಣದಲ್ಲಿರುವ ಸಂತ ಕನಕದಾಸ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ. ಬಳಿಕ ಪಟ್ಟಣದ ಎಂ. ಜಿ. ವಿ. ಸಿ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿ. 2018ರಲ್ಲಿ ಬಿ. ಕಾಂ. ಪದವಿ ಪೂರ್ಣಗೊಳಿಸಿ ಯುವಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ್ದರು.
ಯಲಗೂರೇಶ ಅವರ ಹಿರಿಯ ಸಹೋದರಿ ರೇಖಾ ಲಮಾಣಿ ಶಿಕ್ಷಕಿಯಾಗಿದ್ದು ಮತ್ತೋರ್ವ ಸಹೋದರಿ ಶಿಲ್ಪಾ ಲಮಾಣಿ ಗೋವಾದಲ್ಲಿ ಪತಿಯೊಂದಿಗೆ ವಾಸವಾಗಿದ್ದಾರೆ. ಕಿರಿಯ ಸಹೋದರಿ ಅಶ್ವಿನಿ ನಾಯಕ ಎಂ. ಕಾಂ ಓದುತ್ತಿದ್ದಾರೆ. ಸಹೋದರ ಸಚಿನ್ ಮೈಸೂರಿನಲ್ಲಿ ಡಿ. ಆರ್. ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಸಹೋದರ್ ರಾಹುಲ ನಾಯಕ ಬಿ. ಎ. ವ್ಯಾಸಂಗ ಮಾಡುತ್ತಿದ್ದಾರೆ
ಇವರು ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದು ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗಲಿಲ್ಲ. ಅವರ ನೆಚ್ಚಿನ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆದಿದ್ದು. ಸ್ವಲ್ಪ ಕಠಿಣ ಎನಿಸಿದರೂ ಪರಿಶ್ರಮದಿಂದ ಓದಿದರೆ ಕನ್ನಡದಲ್ಲೂ ಸಾಧನೆ ಮಾಡಬಹುದು ಎಂದು ಯಲಗೂರೇಶ ನಾಯಕರವರು ಹೇಳಿದ್ದಾರೆ.
ಯಲಗೂರೇಶನ ತಂದೆ ಅರ್ಜುನ್ ನಾಯಕ ಎಲ್. ಐ. ಸಿ ಏಜೆಂಟರಾಗಿದ್ದು ಹುಣಸಗಿ ಶಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಉಮಾಬಾಯಿ ಗೃಹಿಣಿಯಾಗಿದ್ದರೆ, ಹಿರಿಯ ಪುತ್ರಿ ರೇಖಾ ಲಮಾಣಿ ಶಿಕ್ಷಕಿಯಾಗಿದ್ದಾರೆ. ಇನ್ನೋರ್ವ ಸಹೋದರಿ ಶಿಲ್ಪಾ ಲಮಾಣಿ ಗೋವಾದಲ್ಲಿ ಪತಿಯೊಂದಿಗೆ ವಾಸವಾಗಿದ್ದರೆ. ಮತ್ತೊರ್ವ ಸಹೋದರಿ ಅಶ್ವಿನಿ ನಾಯಕ ಎಂ. ಕಾಂ ಓದುತ್ತಿದ್ದಾರೆ. ಸಹೋದರ ಸಚಿನ ಮೈಸೂರಿನಲ್ಲಿ ಡಿ. ಆರ್. ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕನ ತಮ್ಮ ರಾಹುಲ ನಾಯಕ ಬಿ. ಎ. ಓದುತ್ತಿದ್ದಾನೆ.
ಈ ಮೂಲಕ ಯಲಗೂರೇಶ ಕನ್ನಡದಲ್ಲಿ ಪರೀಕ್ಷೆ ಬರೆದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಪ್ರೇರಣೆಯಾಗಿದ್ದಾರೆ.