ಸಾಧಿಸಬೇಕೆಂಬ ಹಠ ಹಾಗೂ ಛಲ ಇದ್ದರೆ ಆದರೆ ಅದನ್ನು ಸಾಧಿಸಲು ಸಾಧ್ಯ ಎಂಬ ಮಾತಿನಂತೆ CAT 2023 ರಲ್ಲಿ 99.99 ಪರ್ಸೆಂಟೈಲ್ ಗಳಿಸಿದ ಏಕೈಕ ಮಹಿಳಾ ಅಭ್ಯರ್ಥಿಯ ಯಶೋಗಾಥೆ ಇಲ್ಲಿದೆ.
ದೆಹಲಿ ಮೂಲದವರಾದ ಇಶಿಕಾ ಗುಪ್ತಾ ಅವರು ಸಾಮಾನ್ಯ ಪ್ರವೇಶ ಪರೀಕ್ಷೆ CAT 2023 ರಲ್ಲಿ ಅತ್ಯುತ್ತಮವಾದ 99.99 ಶೇಕಡಾವನ್ನು ಸಾಧಿಸಿ ದಾಖಲೆಯ ಫಲಿತಾಂಶದ ಬರೆದರು.
ದೆಹಲಿಯಲ್ಲಿ ಹುಟ್ಟಿ ಬೆಳೆದ ಇಶಿಕಾ ಅವರು ದ್ವಾರಕಾದ ಮ್ಯಾಕ್ಸ್ಫರ್ಡ್ ಶಾಲೆಯಿಂದ 10 ನೇ ತರಗತಿಯನ್ನು ಮತ್ತು ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್ನಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದರು.
ಪ್ರಸ್ತುತ ದೆಹಲಿಯ ನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಗಣಿತ ಮತ್ತು ಕಂಪ್ಯೂಟಿಂಗ್ನಲ್ಲಿ ಬಿಟೆಕ್ ಓದುತ್ತಿದ್ದಾರೆ.
"ನಾನು ಉತ್ತಮ ರ್ಯಾಂಕ್ ಪಡೆದರೂ, ಇನ್ನು ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದನ್ನು ನೋಡಲು ನಾನು ಬಯಸುತ್ತೇನೆ" ಎಂಬುವುದು ಅವರ ಆಶಯವಾಗಿದೆ.
ನಾನು ಪರೀಕ್ಷೆಗೆ ಸತತವಾಗಿ ತಯಾರಿ ನಡೆಸುತ್ತಿದ್ದೆ. ಸೋಮವಾರದಿಂದ ಶುಕ್ರವಾರದವರೆಗೆ ಕಾಲೇಜಿಗೆ ಹೋಗಬೇಕಾಗಿತ್ತು, ಆದ್ದರಿಂದ ಕಾಲೇಜು ಮುಗಿದಾಗಲೆಲ್ಲಾ ನಾನು ಕಾಲೇಜಿನಿಂದ ಮನೆಗೆ ಹಿಂದಿರುಗಿದ ನಂತರ, ನಿಯಮಿತವಾಗಿ ಸ್ವಲ್ಪ ಸಮಯವನ್ನು CAT ಸಿದ್ಧತೆಗೆ ಮೀಸಲಿಡುತ್ತಿದ್ದೆ ಎಂದು ಅವರು ಹೇಳಿದರು.
TIME ಇನ್ಸ್ಟಿಟ್ಯೂಟ್ನಿಂದ ತರಬೇತಿ ಪಡೆದ ಕಾರಣ VARC ವಿಭಾಗದಲ್ಲಿ ತನ್ನ ಗುರಿಯನ್ನು ಹೊಂದಿವ ಮೂಲಕ ಇಶಿಕಾ ಅವರು ಈಗ ಪ್ರತಿಷ್ಠಿತ IIM ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆನ್ನುವ ಗುರಿಯನ್ನ ಹೊಂದಿದ್ದಾರೆ