ನವದೆಹಲಿ,ಏ 20(Daijiworld News/MSP): ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ವಿರುದ್ಧ ಅವರ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿರೋ ಹಿನ್ನೆಲೆ ಶನಿವಾರ ಸುಪ್ರೀಂ ಕೋರ್ಟ್ ಪೀಠ, ವಿಶೇಷ ವಿಚಾರಣೆ ನಡೆಸಿತು. ನ್ಯಾಯಮಂಡಳಿಯು ಸ್ವಾತಂತ್ರವು ತೀವ್ರ ಅಪಾಯದಲ್ಲಿ ಎಂದು ಅಭಿಪ್ರಾಯಪಟ್ಟ ಪೀಠ, ನ್ಯಾಯಮೂರ್ತಿಗಳ ಬಗ್ಗೆ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಮಾಧ್ಯಮದ ಬುದ್ದಿಮತ್ತೆಗೆ ಬಿಡುತ್ತಿದ್ದೇವೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲು ಮಾಧ್ಯಮಗಳು ಇದನ್ನು ನಿಲ್ಲಿಸುವುದು ಒಳಿತು ಎಂದು ವಿಚಾರಣೆಯನ್ನು ನ್ಯಾಯಾಲಯ ಮುಕ್ತಾಯಗೊಳಿಸಿತು.
ಸಾರ್ವಜನಿಕ ಮಹತ್ವ ಪಡೆದಿರುವ ಕಾರಣ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಸ್ಪೆಷಲ್ ಹಿಯರಿಂಗ್ ನಡೆಸಿತ್ತು. ಈ ಸಂದರ್ಭ ಸಿಜೆಐ ಗೊಗೋಯಿ ತಮ್ಮ ವಿರುದ್ಧದ ಆರೋಪಗಳನ್ನ ತಳ್ಳಿಹಾಕಿದರು. ಮಹಿಳೆ ಮಾಡಿದ ಆರೋಪಗಳಿಗೆ ಉತ್ತರ ಕೊಡಲು ನಾನು ಕೆಳಮಟ್ಟಕ್ಕೆ ಇಳಿಯಲಾರೆ. ಆದರೆ ಆರೋಪಗಳಿಗೆ ನಾನು ಕುಗ್ಗಲಾರೆ. ನ್ಯಾಯಪೀಠದಲ್ಲಿ ಕುಳಿತು ನನ್ನ ಕರ್ತವ್ಯವನ್ನು ಭಯವಿಲ್ಲದೆ ಮುಂದುವರಿಸುತ್ತೇನೆ. ನನ್ನ 20 ವರ್ಷಗಳ ನಿಸ್ವಾರ್ಥ ಸೇವೆಯ ಬಳಿಕ ನ್ಯಾಯಾಧೀಶನಾಗಿ ನೇಮಕ ಮಾಡಿದ್ದು, ನನ್ನ ಉಳಿತಾಯ ಹಣ ಈಗಲೂ ಕೇವಲ 6.80 ಲಕ್ಷ ರೂಪಾಯಿ ಆಗಿದೆ. ನನ್ನನ್ನು ಹಣದಿಂದ ಖರೀದಿಸಲು ಸಾಧ್ಯವಾಗದೇ ಇರೋವಾಗ ಬೇರೆ ದಾರಿ ಹುಡುಕಿದ್ದಾರೆ. ನನ್ನ ವಿರುದ್ದ ಆರೋಪಿಸಿರುವ ಮಹಿಳೆ ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಆಕೆಯ ವಿರುದ್ಧ ಎರಡು ಎಫ್ಐಆರ್ಗಳಿವೆ. ಆದರೂ ಸುಪ್ರೀಂ ಕೋರ್ಟ್ ಸೇವೆಗೆ ಪ್ರವೇಶ ಪಡೆದಿದ್ದು ಹೇಗೆ ಎಂದು ಪ್ರಶ್ನಿದರು.
ಆರೋಪಗಳ ವಿರುದ್ದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಪೀಠ ಯಾವುದೇ ಆದೇಶ ನೀಡಲಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲು ಮಾಧ್ಯಮಗಳು ಇದನ್ನು ನಿಲ್ಲಿಸಬೇಕು ಎಂದು ಪೀಠ ಹೇಳಿತು.
ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು ನ್ಯಾಯಾಲಯದ 22 ಜಡ್ಜ್ಗಳಿಗೆ ಪತ್ರ ಬರೆದು ವಿವರಿಸಿದ್ದರು.