ನವದೆಹಲಿ,ಡಿ 27 (DaijiworldNews/MS): ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಸದ್ಯ ಪ್ರಕ್ರಿಯೆಗಳ ಮೇಲ್ವಿಚಾರಣೆ ಮಾಡಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮೂವರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.
ಭೂಪಿಂದರ್ ಸಿಂಗ್ ಬಜ್ವಾ ಸಮಿತಿಯ ನೇತೃತ್ವ ವಹಿಸಿದ್ದು, ಎಂ.ಎಂ. ಸೋಮಯ್ಯ ಮತ್ತು ಶ್ರೀಮತಿ ಮಂಜುಷಾ ಕನ್ವರ್ ಸದಸ್ಯರಾಗಿದ್ದಾರೆ.
WFI ಇತ್ತೀಚೆಗೆ ನಕಾರಾತ್ಮಕ ಕಾರಣಗಳಿಂದು ಸುದ್ದಿಯಲ್ಲಿದೆ, ಚುನಾವಣೆಯ ನಂತರ ಡಬ್ಲ್ಯುಎಫ್ಐನ ಹೊಸ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾದ ನಂತರ ಕುಸ್ತಿಪಟುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕುಸ್ತಿಪಟು ಸಾಕ್ಷಿ ಮಲಿಕ್ ಅವರು ತಮ್ಮ ಮುಂದೆಯೂ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸರನ್ ಸಿಂಗ್ ವಿರುದ್ಧ ಹೋರಾಟ ನಡೆಸುವುದಾಗಿ ಘೋಷಿಸಿ ಕುಸ್ತಿಗೆ ವೃತ್ತಿ ಘೋಷಿಸಿದ್ದರು.
ಈ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರ ಕುಸ್ತಿ ಫೆಡರೇಶನ್ ಅಮಾನತುಗೊಳಿಸಿತ್ತು. ಇದಾದ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ತಾತ್ಕಾಲಿಕ ಕುಸ್ತಿ ಸಮಿತಿಯನ್ನ ರಚಿಸಿದೆ.