ನವದೆಹಲಿ, ಡಿ 26 (DaijiworldNews/PC) : ಜೀವನದಲ್ಲಿ ಸಾಧಿಸಬೇಕೆಂಬ ಗುರಿಯೊಂದಿದ್ದರೆ ಅದಕ್ಕಾಗಿ ಶೃದ್ದೆಯಿಂದ ಯತ್ನಿಸಿದರೆ ಉಶಸ್ಸು ಖಂಡಿತಾ ಒಲಿಯುತ್ತದೆ.
UPSCಯಂತಹ ಕಠಿಣ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಲು ವಿವಿಧ ವಿಶೇಷ ತರಬೇತಿ, ಕೋಚಿಂಗ್ ಮುಖ್ಯವಾಗುತ್ತದೆ ಆದರೆ ಇವೆಲ್ಲದಕ್ಕೆ ವಿರುದ್ದ ಎಂಬಂತೆ ಇಲ್ಲೊಬರು ಯಾವುದೇ ವಿಶೇಷ ತರಬೇತಿಗಳನ್ನು ಪಡೆಯದೇ UPSC ಪರೀಕ್ಷೆಯನ್ನು ಎದುರಿಸಿ ಉತ್ತಮ ಸಾಧನೆ ಮಾಡಿದ್ದಾರೆ ಅರುಣ್ರಾಜ್ .
ಅರುಣ್ರಾಜ್ ಬಾಲ್ಯದಿಂದಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಕಾನ್ಪುರದ ಐಐಟಿಗೆ ಪ್ರವೇಶ ಪಡೆದರೂ, ಅವರ ಅಂತಿಮ ಆಕಾಂಕ್ಷೆ ಐಎಎಸ್ ಅಧಿಕಾರಿಯಾವುದಾಗಿತ್ತು. ಅವರು ತಮ್ಮ ಇಂಜಿನಿಯರಿಂಗ್ ಅಧ್ಯಯನದ ಅಂತಿಮ ವರ್ಷದಲ್ಲಿ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಇವರು ಉದ್ಯೋಗಕ್ಕಾಗಿ ಒಲವು ತೋರಲಿಲ್ಲ. ಬದಲಾಗಿ UPSC ಗಾಗಿ ಅಧ್ಯಯನ ಮಾಡಲು ತನ್ನ ಸಮಯವನ್ನು ವಿನಿಯೋಗಿಸಿಕೊಂಡರು. ಎನ್ಸಿಇಆರ್ಟಿ ಪುಸ್ತಕಗಳ ಹೆಚ್ಚಾಗಿ ಬಳಸಿದರು.
ಜೊತೆಗೆ ಆನ್ಲೈನ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಧ್ಯಾಯನವನ್ನು ಮಾಡಿದರು. 2014 ರ UPSC ಫಲಿತಾಂಶಗಳು ಪ್ರಕಟವಾದಾಗ ಅವರ ಕಠಿಣ ಪರಿಶ್ರಮವು ಅವರಿಗೆ ಫಲ ನೀಡಿತು, ಅವರು ತಮ್ಮ ಮೊದಲ ಪ್ರಯತ್ನದಲ್ಲಿ AIR 34 ಅನ್ನು ಪಡೆದುಕೊಂಡರು.
ಪ್ರಸ್ತುತ ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ತಮಿಳುನಾಡು ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಅರುಣ್ ರಾಜ್ ಅವರು 2015 ರ ಬ್ಯಾಚ್ನ ತಮಿಳುನಾಡು ಕೇಡರ್ IAS ಅಧಿಕಾರಿಯಾಗಿದ್ದಾರೆ.
ಯಾವುದೇ ತರಬೇತಿ ಇಲ್ಲದೆ ತನ್ನ ಕಠಿಣ ಪರಿಶ್ರಮ ದಿಂದ UPSC ಅನ್ನು ಭೇದಿಸಬಹುದು ಎಂಬುದಕ್ಕೆ ಅರುಣ್ ರಾಜ್ ರವರು ಸಾಕ್ಷಿಯಾಗಿದ್ದಾರೆ.