ಹುಬ್ಬಳ್ಳಿ, ಡಿ24 (daijiworldNews/AK): ರಾಜ್ಯದಲ್ಲಿ ಹಿಜಾಬ್ ನಿಷೇಧವೇ ಆಗಿಲ್ಲ. ಇಲ್ಲದ ನಿಷೇಧವನ್ನು ರದ್ದುಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಹೇಳಿಕೆ ನೀಡಿರುವುದು ಮುಠ್ಠಾಳತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಅನಗತ್ಯ ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿಅವರು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕೆಂಬುದು ಕೋರ್ಟ್ ಆದೇಶವಾಗಿಯೇ ವಿನಃ ಅದನ್ನು ಯಾರು ನಿಷೇಧ ಮಾಡಿಲ್ಲ. ಇದನ್ನುಅರಿಯದ ಅಥವಾ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸಿಎಂ ಬೌದ್ಧಿಕ ದಿವಾಳಿತನ ತೋರಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಯೋಜನೆ ಮಾಡಿ ಮಾತನಾಡಬೇಕು ಅದು ಬಿಟ್ಟು ಕೇವಲ ಮತ ತುಷ್ಟಿಕರಣಕ್ಕೆ ಇಲ್ಲವೇ ಸರಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದರು.
ಬಿಜೆಪಿಯವರ ವಿರುದ್ಧ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಹರಿಪ್ರಸಾದರನ್ನು ಕಾಂಗ್ರೆಸ್ ನಲ್ಲಿ ಬೂಟಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದ್ದು ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಹತಾಶೆಯಲ್ಲಿ ಏನೇನೋ ಹೇಳಿಕೆ
ನೀಡುತ್ತಿದ್ದಾರೆ ಎಂದರು.