ಗುಜರಾತ್, ಡಿ 23 (DaijiworldNews/MS): ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ L1 ಜನವರಿ 6 (ಬುಧವಾರ) L1 ಪಾಯಿಂಟ್ಗೆ ಪ್ರವೇಶಿಸುವ ನಿರೀಕ್ಷೆ ಇದೆ. ಈ ಕುರಿತ ನಿಖರ ಸಮಯ ವನ್ನು ಪ್ರಕಟಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024ರಲ್ಲಿ ಮಾತನಾಡಿದ ಅವರು, " ಆದಿತ್ಯ L1 ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ತಲುಪಲಿದೆ . ಆ ಬಳಿಕ ಅದು ಮುಂದೆ ಹೋಗುವುದಿಲ್ಲ. ಅದು ಆ ಹಂತಕ್ಕೆ ಹೋಗುತ್ತದೆ ತಲುಪಿದ ನಂತರ, ಅದು ಅದರ ಸುತ್ತಲೂ ತಿರುಗುತ್ತದೆ ಮುಂದಿನ ಐದು ವರ್ಷಗಳವರೆಗೆ ಸೂರ್ಯನ ಮೇಲೆ ನಡೆಯುವ ವಿವಿಧ ಘಟನೆಗಳನ್ನು ಅಳೆಯಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
L1 ಪಾಯಿಂಟ್ಗೆ ಬಾಹ್ಯಾಕಾಶ ನೌಕೆಯ ಪ್ರವೇಶದ ಕೊನೆಯ ಸಿದ್ಧತೆಗಳು ಪ್ರಸ್ತುತ ಹಂತಹಂತವಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ.
ಹಾಲೋ ಆರ್ಬಿಟ್ L1 ನಿಂದ ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಭಾರತೀಯ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾದ ಮಿಷನ್ ಅನ್ನು ಇಸ್ರೋ ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಪ್ರಾರಂಭಿಸಿತ್ತು.