ತೆಲಂಗಾಣ,ಡಿ23 (daijiworldNews/SK):ಸಾಧಿಸಬೇಕೆಂಬ ದೃಢ ನಿರ್ಧಾರ ನಮ್ಮಲ್ಲಿದ್ದರೆ ಅದೆಷ್ಟೋ ಸವಾಲುಗಳು ಎದುರಾದರೂ ಅದನ್ನು ನಿಭಾಯಿಸು ಶಕ್ತಿ ನಮ್ಮಲ್ಲಿರುತ್ತದೆ. ಅದೇ ರೀತಿ ಇಲ್ಲೊಬ್ಬರು ಯಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ಸೋಲುಂಡರೂ ಕುಗ್ಗದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಆಲ್ ಇಂಡಿಯಾ ರ್ಯಾಂಕ್ ನಲ್ಲಿ 3 ಸ್ಥಾನ ಪಡೆದ ಉಮಾ ಹರತಿ ಎನ್ ಅವರ ಯಶೋಗಾಥೆ ಇದು.
ಉಮಾ ಹರತಿ ಎನ್ ಮೂಲತಃ ತೆಲಂಗಾಣದ ನಲ್ಗೊಂಡ ಜಿಲ್ಲೆಯವರು. ಹೈದರಾಬಾದ್ ನಲ್ಲಿಯೇ ತಮ್ಮ ಪ್ರಾಥಮಿಕ, ಕಾಲೇಜು ಶಿಕ್ಷಣವನ್ನು ಪಡೆದ ಅವರು, ಐಐಟಿ ಹೈದರಾಬಾದ್ ನಲ್ಲಿ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪಡೆದರು.
ಇನ್ನು ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದ ಉಮಾ ಹರತಿ ತಮ್ಮ ಅಧ್ಯಯನ ದಿನಗಳಲ್ಲೇ ಯಪಿಎಸ್ಸಿ ಪರೀಕ್ಷೆ ಬರೆಯಬೇಕೇಂಬ ಕನಸನ್ನು ಕಂಡಿದ್ದರು. ನಂತರ ಅಧ್ಯಯನ ಪೂರ್ಣಗೊಂಡ ಬಳಿಕ ಆನ್ಲೈನ್ ಸಿವಿಲ್ ಸರ್ವೀಸೆಸ್ ಕೋಚಿಂಗ್ ಸಂಸ್ಥೆಯಲ್ಲಿ ಪರೀಕ್ಷೆಗೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿ ಪರೀಕ್ಷೆ ಬರೆಯಲು ಮುಂದಾದರು.
ಆದರೆ ಉಮಾ ಅವರು ನ್ಕಾಲು ಬಾರಿ ಯಪಿಎಸ್ಸಿ ಪರೀಕ್ಷೆ ಬರೆದರೂ ತೇರ್ಗಡೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಛಲ ಬೀಡದ ಅವರು ಮರಳಿ ಯತ್ನವ ಮಾಡು ಅನ್ನುವ ಗಾದೆ ಮಾತಿನಂತೆ 2022ನೇ ಸಾಲಿನಲ್ಲಿ ಐದನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಆಲ್ ಇಂಡಿಯಾ ರ್ಯಾಂಕ್ ನಲ್ಲಿ 3 ಸ್ಥಾನ ಪಡೆದು ಯಶಸ್ಸು ಕಂಡರು.
ಈ ಮೂಲಕ ಉಮಾ ಅವರ ಈ ಪ್ರಯಾಣವು ಪ್ರಯತ್ನಿಸಿ ನಿರಾಶರಾದವರಿಗೆ ಎಷ್ಟೋ ಮಂದಿಗೆ ಪ್ರೇರಣೆಯಾಗುವುದರ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಯ ಗೆಲುವಿಗೆ ತಾಳ್ಮೆಯೇ ಮುಖ್ಯ ಅಡಿಪಾಯ ಎಂದು ತೋರಿಸಿಕೊಟ್ಟಿದ್ದಾರೆ.