ನವದೆಹಲಿ:ಏ 19(Daijiworld News/AZM):ವೀರ ಮರಣವನ್ನಪ್ಪಿದ ಹೇಮಂತ್ ಕರ್ಕೇರರವರು ಸಾವನ್ನಪ್ಪಿದ್ದು ನನ್ನ ಶಾಪದಿಂದ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆಯನ್ನು ಐಪಿಎಸ್ ಅಧಿಕಾರಿಗಳ ಸಂಘ ಖಂಡಿಸಿದೆ.
ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಯವರಿಗೆ, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್, ನೀನು ಸರ್ವನಾಶ ಆಗುತ್ತೀಯಾ ಎಂದು ನಾನು ಕರ್ಕರೆ ಅವರಿಗೆ ಶಪಿಸಿದ್ದೆ, ಆ ಶಾಪ ಅವರಿಗೆ ತಟ್ಟಿತು ಎಂಬ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಖಂಡಿಸಿದ ಇಂಡಿಯನ್ ಪೊಲೀಸ್ ಸರ್ವೀಸ್ ಅಸೋಸಿಯೇಷನ್, ಅಶೋಕ್ ಚಕ್ರ ಪುರಸ್ಕೃತ ಹೇಮಂತ್ ಕರ್ಕರೆ ಐಪಿಎಸ್ ಅವರು ಉಗ್ರರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಹುತಾತ್ಮರ ಬಲಿದಾನವನ್ನು ಅವಮಾನಿಸಿದ ಅಭ್ಯರ್ಥಿಯ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಟ್ವೀಟಿಸಿದೆ.
ಅಭ್ಯರ್ಥಿಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಈ ರೀತಿ ಅವಮಾನಿಸಿರುವುದು ತುಂಬಾ ದುಃಖವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.