ಚೆನೈ, ಡಿ 21 (DaijiworlsNews/AA): ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಸಚಿವ ಕೆ.ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಲಯವು ಮಾಜಿ ಸಚಿವ ಕೆ.ಪೊನ್ಮುಡಿ ಅವರನ್ನು ಡಿ.19 ರಂದೇ ಅಪರಾಧಿ ಎಂದು ಘೋಷಿಸಿದ್ದು, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ತೀರ್ಪು ಪಕಟಿಸಿದ ನ್ಯಾ. ಜಿ. ಜಯಚಂದ್ರನ್ ಅವರು ಪೊನ್ಮುಡಿ ಹಾಗೂ ಅವರ ಪತ್ನಿಗೆ 50 ಲಕ್ಷ ರೂ. ದಂಡ ವಿಧಿಸಿ, ದೋಷಿಗಳೆಂದು ಘೋಷಿಸಿದ್ದಾರೆ. ಜೊತೆಗೆ ಒಂದು ತಿಂಗಳ ಕಾಲ ಈ ತೀರ್ಪನ್ನು ಅಮಾನತಿನಲ್ಲಿಡಲಾಗಿದೆ.
2011 ರ ಪ್ರಕರಣ ಇದಾಗಿದ್ದು, 2016 ರಲ್ಲಿ ಕೆಳ ನ್ಯಾಯಾಲಯ ಮಾಜಿ ಸಚಿವ ಪೊನ್ಮುಡಿ ಅವರನ್ನು ಖುಲಾಸೆಗೊಳಿಸಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ಡಿ.19 ರಂದು ರದ್ದು ಮಾಡಿ, ದೋಷಿ ಎಂದು ತೀರ್ಪು ನೀಡಿದೆ.