ಉತ್ತರಪ್ರದೇಶ, ಡಿ 18 (DaijiworldNews/SK):ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ, ಅದೆಷ್ಟೊ ಜನರು ಹಗಲಿರುಲು ಎನ್ನದೇ ಅಭ್ಯಾಸವನ್ನು ನಡೆಸುತ್ತಿರುತ್ತಾರೆ. ಆದರೆ ಇಲ್ಲೋಬ್ಬರು ತರಬೇತಿ ಕೇಂದ್ರಗಳಿಗೆ ಹಣ ವ್ಯಯಿಸದೇ ಸ್ವಯಂ-ಅಧ್ಯಯನವನ್ನು ನಡೆಸಿ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಅರುಣ್ ರಾಜ್ ರ ಕಥೆ ಇದು.
ಪ್ರಸ್ತುತ ತಮಿಳುನಾಡು ಸರ್ಕಾರದ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ತಮಿಳುನಾಡು ಲಿಮಿಟೆಡ್ ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ರಾಜ್ ಮೂಲತಃ ಉತ್ತರ ಪ್ರದೇಶದವರು.
ಅರುಣ್ ರಾಜ್ ತನ್ನ ಶಾಲಾ ದಿನಗಳಿಂದಲೂ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅವರ ಮಧ್ಯಂತರ ಶಿಕ್ಷಣದ ಬಳಿಕ ಐಐಟಿ ಕಾನ್ ಪುರಕ್ಕೆ ಪ್ರವೇಶಾತಿಯನ್ನು ಪಡೆದರು. ಆದರೆ ಅವರಿಗೆ ಇಂಜಿನಿಯರ್ ಆಗುವ ಬದಲು, ಯುಪಿಎಸ್ಸಿಯನ್ನು ಭೇದಿಸಿ ಐಎಎಸ್ ಅಧಿಕಾರಿಯಾಗುವುದು ಕನಸಾಗಿತ್ತು.
ಆದ್ದರಿಂದ, ಅವರು ಪದವಿಯ ನಾಲ್ಕನೇ ವರ್ಷದಲ್ಲಿ ಯುಪಿಎಸ್ಸಿ ಗೆ ಸಿದ್ಧತೆಯನ್ನು ಆರಂಭಿಸಿದರು. ಶಿಕ್ಷಣದ ಜೊತೆ ಜೊತೆಗೆ UPSC ಗೆ ತಯಾರಿ ನಡೆಸಿದ ಅವರು ಇಂಜಿನಿಯರಿಂಗ್ ಮುಗಿಸಿದ ನಂತರ ಉದ್ಯೋಗಕ್ಕೆ ಸೇರುವ ಬದಲು ಸ್ವಯಂ ವ್ಯಾಸಂಗದತ್ತ ಗಮನಹರಿಸಿ UPSC ತಯಾರಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು.ಹೆಚ್ಚಿನ ಅಧ್ಯಯನಕ್ಕಾಗಿ NCERT ಪುಸ್ತಕಗಳವನ್ನು ಬಳಸುತ್ತಿದ್ದರು.
ಹೀಗೆ UPSC ಗೆ ಸಿದ್ಧತೆಯನ್ನು ನಡೆಸಿದ ಅರುಣ್ ರಾಜ್ ಉಚಿತ ಆನ್ ಲೈನ್ ತರಗತಿಗಳಿಗೆ ಹಾಜರಾಗುವ ಮೂಲಕ AIR-34 ರ್ಯಾಂಕ್
ನೊಂದಿಗೆ 22ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ನಲ್ಲಿ ತೆರ್ಗಡೆಯಾದರು.
ಈ ಮೂಲಕ ಯಾವುದೇ ಕೋಂಚಿಗ್ ಪಡೆಯದೆ ಸ್ವ-ಪ್ರಯತ್ನದಿಂದಲೇ, ಕೇವಲ ಪುಸ್ತಕಗಳನ್ನು ಓದಿ ಆನ್ ಲೈನ್ ತರಗತಿಗಳಿಗೆ ಹಾಜರಾಗಿಯು ಯುಪಿಎಸ್ಸಿ ಪರೀಕ್ಷೆಯಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ.