ದೆಹಲಿ, ಡಿ 18 (DaijiworldNews/SK): ಡಿ. 13 ರಂದು ಸಂಸತ್ ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಅಗಂತಕರು ಜಿಗಿದು ಭಾರಿ ಭದ್ರತಾ ಲೋಪ ಉಲ್ಲಂಘನೆ ನಡೆದ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ವಕೀಲ ಅಬು ಸೊಹೆಲ್ ಇಂದು ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಇದು ದೊಡ್ಡ ಭದ್ರತಾ ಲೋಪವಾಗಿದೆ ಏಕೆಂದರೆ ಹೊಗೆ ವಿಷಕಾರಿಯಾಗಿರಬಹುದು ಅಥವಾ ಹೊಗೆ ಡಬ್ಬಿಗಳ ಬದಲಿಗೆ ಮಾರಕ ಮದ್ದುಗುಂಡುಗಳೊಂದಿಗೆ ಪ್ರವೇಶಿಸಬಹುದಾಗಿತ್ತು, ಇದು ತುಂಬಾ ಆಘಾತಕಾರಿಯಾಗಿದೆ ಎಂದು ನಮೂದಿಸಿದ್ದಾರೆ.
ಇದರಲ್ಲಿ ಕೈವಾಡವಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆರೋಪ ಹೊರಿಸಲಾಗಿದೆ. ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ರಾಷ್ಟ್ರದ ಅತ್ಯುನ್ನತ ಸದನದ ಭದ್ರತೆಯಲ್ಲಿಯೂ ಲೋಪ ನಡೆದಿದೆ. ಇದರ ಜೊತೆಗೆ ನಾಗರಿಕರ ಪ್ರಾಣ ಮತ್ತು ಆಸ್ತಿಯೂ ಅಪಾಯದಲ್ಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ