ವಿಜಯಪುರ, ಡಿ 17 (DaijiworldNews/AK):ಲೋಕಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರ ಬಳಿ ಪಾಸ್ ಕೊಡಿ ಎಂದು ಜನ ಬರುತ್ತಾರೆ. ಪಾಸ್ ಪಡೆದು ಹೋದವರನ್ನು, ನಾವೇ ಬಾಂಬ್ ಇಟ್ಟುಕೊಂಡಿದ್ದಾರಾ? ಭಯೋತ್ಪಾದಕರಾ? ಎಂದು ಸ್ಕ್ರೀನಿಂಗ್ ಮಾಡಲು ಆಗುತ್ತದೆಯೇ? ಈ ಪ್ರಕರಣದ ತನಿಖೆಯಾದರೆ ಯಾರು ಈಗ ಟೀಕೆ ಮಾಡುತ್ತಿದ್ದಾರೋ ಅವರೇ ಸಿಕ್ಕಿಬೀಳುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಹಲವರು ಪಾಸ್ಗಾಗಿ ಬರುತ್ತಾರೆ. ಕಾಂಗ್ರೆಸ್ನವರು ಬಂದ್ರೂ ನಾವು ಪಾಸ್ ಕೊಡುತ್ತೇವೆ. ನನ್ನ ಬಳಿ ಕಾಂಗ್ರೆಸ್ನವರು ಬಂದು ಪಾಸ್ ಒಯ್ಯುತ್ತಾರೆ.
ಅವರನ್ನೆಲ್ಲ ನಾವು ಸ್ಕ್ರೀನಿಂಗ್ ಮಾಡಲು ಆಗುವುದಿಲ್ಲ. ಅದು ಭದ್ರತಾ ಸಿಬ್ಬಂದಿಯ ಕೆಲಸ ಎಂದು ಸಂಸದ ಪ್ರತಾಪ್ ಸಿಂಹ ಪರ ಅವರು ಬ್ಯಾಟ್ ಬೀಸಿದ್ದಾರೆ.