ತಮಿಳುನಾಡು,16(DaijiworldNews/RA): ನಮ್ಮಲ್ಲಿ ಹಲವಾರು ಮಂದಿ ವಿವಿಧ ಕಾರಣಗಳಿಗಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೀವನ ಇಲ್ಲಿಗೆ ಮುಗಿಯಿತು ಅಂದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಿಗೆ ಇವತ್ತು ನಾವು ಹೇಳೋ ಈ ಮಹಿಳಾ ಸಾಧಕಿಯೊಬ್ಬರು ಮಾದರಿಯಾಗಿ ನಿಲ್ಲುತ್ತಾರೆ. ತನ್ನಿಂದ ಆಗಲ್ಲ ಅನ್ನುವವರಿಗೆ ಆಗುತ್ತೆ ಪ್ರಯತ್ನಿಸಿ ನೋಡು ಅನ್ನುವವರಿಗೆ ಪ್ರೇರಣೆಯ ಸಾಧಕಿ ಈಕೆ.
ಅವರ ಹೆಸರು ಎನ್ ಅಂಬಿಕಾ. ಮನೆಯಲ್ಲಿ ಬಡತನದ ಕಾರಣದಿಂದ ಹತ್ತನೇ ತರಗತಿ ಪಾಸಾಗದ ಈಕೆಯನ್ನು 14 ನೇ ವಯಸ್ಸಿಗೆ ಮನೆಯವರು ತಮಿಳುನಾಡಿನ ದಿಂಡಿಗಲ್ ನಲ್ಲಿ ಕಾನ್ಸ್ಟೇಬಲ್ ಒಬ್ಬರಿಗೆ ಮದುವೆ ಮಾಡಿ ಕೊಡ್ತಾರೆ.
ಜೀವನ ಹೀಗೆ ಮುಂದಕ್ಕೆ ಸಾಗುತ್ತಿರಬೇಕಾದ್ರೆ ವಯಸ್ಸು 18 ಆಗುವುದರೊಳಗೆ ಐಗನ್ ಮತ್ತು ನಿಹಾರಿಕಾ ಎಂಬ ಎರಡೂ ಮಕ್ಕಳು ತಾಯಿ ಆಗುತ್ತಾರೆ ಅಂಬಿಕಾ. ಒಂದು ದಿನ ಈಕೆ ಗಣರಾಜ್ಯೋತ್ಸವ ಸಂದರ್ಭ ಪರೇಡ್ ನಲ್ಲಿ ತನ್ನ ಗಂಡನೊಂದಿಗೆ ಹೋಗ್ತಾಳೆ. ಅಲ್ಲಿ ಆಕೆ ಗಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ಮತ್ತು ತನ್ನ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡಿತಾ ಇದ್ದ.
ಇದನ್ನು ನೋಡಿದ ಆಕೆಗೆ ಕುತೂಹಲ ಹೆಚ್ಚಾಗುತ್ತೆ. ಈ ಕುರಿತು ಅಂಬಿಕಾ ತನ್ನ ಗಂಡನ ಬಳಿ ಚರ್ಚೆ ಮಾಡ್ತಾಳೆ. ತಾನೂ ಕೂಡ ಉನ್ನತ ಅಧಿಕಾರಿ ಆಗಬೇಕು ಅಂತ ಹೇಳ್ತಾಳೆ. ಆದ್ರೆ ಅವಳು ಅವರ ತರ ಆಗಬೇಕು ಅಂದ್ರೆ ಉತ್ತಮವಾಗಿ ಕಲಿತಿರಬೇಕಾಗುತ್ತೆ. ಮನೆಯಲಿದ್ದ ಬಡತನದ ಕಾರಣಕ್ಕೆ ಹತ್ತೇನೆ ತರಗತಿ ಕೂಡ ಈಕೆ ಪಾಸು ಮಾಡಿರಲ್ಲ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖಳಾದ ಆಕೆ ಹತ್ತನೇ ತರಗತಿಯನ್ನು ಪಾಸು ಮಾಡುವುದಕ್ಕೆ ಸಿದ್ಧತೆ ಮಾಡಿ ಓದಿ ಖಾಸಗಿಯಾಗಿ ಪರೀಕ್ಷೆ ಬರೆದು ಉನ್ನತ ಶ್ರೇಣೆಯಲ್ಲಿ ಪಾಸು ಮಾಡುತ್ತಾಳೆ.
ಪಟ್ಟು ಬಿಡದೇ ದೂರ ಶಿಕ್ಷಣದ ಮೂಲಕ ಪದವಿಯನ್ನೂ ಪಡೆದುಕೊಳ್ಳುತ್ತಾಳೆ. ಮುಂದೆ ಆಕೆ ಯುಪಿಎಸ್ ಸಿ ಪರೀಕ್ಷೆ ಮಾಡಬೇಕು. ಆದ್ರೆ ಆ ಪರೀಕ್ಷೆ ಪಾಸ್ ಸಾಮಾನ್ಯ ವಿಚಾರ ಖಂಡಿತಾ ಅಲ್ಲ. ಅದಕ್ಕೆ ಕಠಿಣ ತರಬೇತಿ ಬೇಕಾಗುತ್ತೆ. ಇತ್ತ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕೆಯ ಪತಿ ಪತ್ನಿಯ ಜೊತೆ ನಿಂತು ಮಕ್ಕಳ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡು . ತರಬೇತಿಗಾಗಿ ತನ್ನ ಪತ್ನಿಯನ್ನು ಚೆನ್ನೈಗೆ ಕಳಿಸಿ ಕೊಡ್ತಾರೆ.
ಇನ್ನೂ ಆಕೆ ಎಲ್ಲರ ಹಾಗೆ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಬದಲಿಗೆ ಆಕೆ ದೂರ ಶಿಕ್ಷಣದಲ್ಲಿಯೇ ತನ್ನ ವಿದ್ಯಾಭಾಸ್ಯವನ್ನು ಮುಗಿಸಿದ್ದರಿಂದ ಯು.ಪಿ.ಎಸ್ ಪರೀಕ್ಷೆ ತುಂಬಾನೇ ಕಷ್ಟವಾಗಿ ಪರಿಣಮಿಸಿತು. ತನ್ನ ಗಂಡ, ಮಕ್ಕಳಿಂದ ದೂರುವಿಟ್ಟು ಪ್ರಯತ್ನಪಟ್ಟೂ ಪರೀಕ್ಷೆ ಪಾಸ್ ಮಾಡಿದ್ರೂ ಪಾಸ್ ಆಗುವುದಕ್ಕೆ ಸಾಧ್ಯವಾಗಲಿಲ್ಲ ಅನ್ನುವ ಬೇಸರ ಅವಳಿಗೆ ಕಾಡ್ತಾ ಇತ್ತು.
ಸರಿ ಇನ್ನೊಂದು ಬಾರಿ ಪ್ರಯತ್ನ ಮಾಡೋಣ ಅಂತ ಪರೀಕ್ಷೆಯನ್ನು ಬರೆಯುತ್ತಾಳೆ. ಪಾಸ್ ಆದ್ರೆ ಮುಂದೆ ನೋಡೋಣ . ಇಲ್ಲವಾದ್ರೆ ಯಾವುದಾದರೂ ಶಾಲೆಯಲ್ಲಿ ಟೀಚರ್ ಆಗೋಣ ಅಂತ ನಿರ್ಧಾರ ಮಾಡ್ತಾಳೆ. ಕೊನೆಗೂ ಆಕೆಯ ಶ್ರಮಕ್ಕೆ, ಹಠಕ್ಕೆ ದೇವರು ವರ ಕೊಟ್ಟೆ ಬಿಟ್ಟ.
ಒಂದರಲ್ಲ, ಎರಡಲ್ಲ ನಾಲ್ಕನೇ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೇನ್ಸ್, ಇಂಟರ್ವ್ಯೂನಲ್ಲಿ ಪಾಸ್ ಆಗಿ "ಎನ್ ಅಂಬಿಕಾ ಐಪಿಎಸ್ ಆಗ್ತಾಳೆ. ಅಂಬಿಕಾ ಈಗ ಮುಂಬಯಿ ನಾರ್ಥ 4 ಜೋನ್ ನಲ್ಲಿ ಡಿಸಿಪಿ ಹಲವಾರು ಕಷ್ಟಕರವಾದ ಕೇಸನ್ನು ಸುಲಭವಾಗಿ ಪರಿಹಾರ ಮಾಡುತ್ತಾಳೆ.
ಇದಕ್ಕೆ ಆಕೆಗೆ 2019ಕ್ಕೆ ಲೋಕಮತ್ ಅಂತ ಗೌರವ ನೀಡಲಾಗಿದೆ. ಅಷ್ಟು ಮಾತ್ರವಲ್ಲ ಡಿಪಾಟ್ಮೆಂಟ್ ನಲ್ಲಿ ಲೇಡಿ ಸಿಂಗಮ್ ಅನ್ನುವ ಬಿರುದು ಕೂಡ ಪಡಿತಾಳೆ. ಹೀಗಾಗಿ ನಾವುಗಳು ಹಠ ಅನ್ನುವುದನ್ನು ಕೆಟ್ಟ ಕೆಲಸಗಳಿಗೆ ಉಪಯೋಗ ಮಾಡದೇ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದ್ರೆ ಎಷ್ಟೋ ಪ್ರಯೋಜನಕಾರಿಯಾಗುತ್ತದೆ ಅನ್ನುವುದನ್ನು ಈಕೆಯನ್ನು ನೋಡಿ ಕಲಿಯಬೇಕಾಗಿದೆ.