ಬೆಂಗಳೂರು, ಎ18(Daijiworld News/AZM) : ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು ಒಟ್ಟು ಶೇ. 67.67 ರಷ್ಟು ಮತದಾನವಾಗಿದೆ. ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮತದಾನವಾದರೆ ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗಿದೆ.
ಮಂಗಳೂರು ಒಳಗೊಂಡ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.70, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.26 ಹಾಗೂ ತುಮಕೂರು ಕ್ಷೇತ್ರದಲ್ಲಿ ಶೇ.77.01 ಇದ್ದರೆ, ಹಾಸನದಲ್ಲಿ ಶೇ.77.28 ರಷ್ಟು ಮತದಾನವಾಗಿದೆ.
ರಾತ್ರಿ 8 ಗಂಟೆಗೆ ಸಿಕ್ಕಿದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಶೇ.77.70, ಉಡುಪಿ-ಚಿಕ್ಕಮಗಳೂರು ಶೇ.75.13 ಇದ್ದರೆ, ತುಮಕೂರು ಶೇ.76.89 ರಷ್ಟಿದೆ. ಈ ವೇಳೆ ಬೆಂಗಳೂರು ಉತ್ತರ ಶೇ.48.64, ಬೆಂಗಳೂರು ಕೇಂದ್ರ 45.97, ಬೆಂಗಳೂರು ದಕ್ಷಿಣ 51.55 ರಷ್ಟಿದೆ. ರಾತ್ರಿ 9 ರ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತದಾನ ದಾಖಲಾಗಿದ್ದು, ಶೇ.80.23 ರಷ್ಟಿದೆ. ದಕ್ಷಿಣ ಕನ್ನಡದಲ್ಲಿ ಶೇ.77.70, ಉಡುಪಿ-ಚಿಕ್ಕಮಗಳೂರು ಶೇ.75.26, ತುಮಕೂರಿನಲ್ಲಿ ಶೇ.77.01 ರಷ್ಟಿತ್ತು. ಬೆಂಗಳೂರು ಉತ್ತರ ಶೇ.50.51, ಕೇಂದ್ರ 49.75 ಹಾಗೂ ದಕ್ಷಿಣ 54.12 ರಷ್ಟಿತ್ತು.
ರಾತ್ರಿ 9 ಗಂಟೆಗೆ ಸಿಕ್ಕಿದ ಮಾಹಿತಿ ಪ್ರಕಾರ
ಉಡುಪಿ-ಚಿಕ್ಕಮಗಳೂರು- 75.26
ಹಾಸನ- 77.28
ದಕ್ಷಿಣ ಕನ್ನಡ- 77.70
ಚಿತ್ರದುರ್ಗ- 70.59
ತುಮಕೂರು- 77.01
ಮಂಡ್ಯ- 80.23
ಮೈಸೂರು- 68.85
ಚಾಮರಾಜನಗರ- 73.45
ಬೆಂಗಳೂರು ಗ್ರಾಮಾಂತರ- 64.09
ಬೆಂಗಳೂರು ಉತ್ತರ- 50.51
ಬೆಂಗಳೂರು ಕೇಂದ್ರ- 49.75
ಬೆಂಗಳೂರು ದಕ್ಷಿಣ- 54.12
ಚಿಕ್ಕಬಳ್ಳಾಪುರ- 76.14
ಕೋಲಾರ- 75.94