ನವದೆಹಲಿ, ಡಿ 15 (DaijiworldNews/SK): ಸಂಸತ್ತಿ ಭವನದ ಭದ್ರತೆಗೆ ವಿಪತ್ತು ತಂಡ ಮಾಸ್ಟರ್ಮೈಂಡ್ ಲಲಿತ್ ಝಾ ಅವರೊಂದಿಗೆ ಟಿಎಂಸಿ ಶಾಸಕರ ಇರುವ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಇದು ರಾಜಕೀಯವಾಗಿ ಭಾರೀ ಕೆಸರೆರಚಾಟಕ್ಕೆ ಕಾರಣವಾಗಿದೆ.
ಲೋಕಸಭೆ ಹಾಗೂ ಸಂಸತ್ ಭವನದ ಹೊರಗಡೆ ಸ್ಮೋಕ್ ಕ್ಯಾನ್ ಎಸೆದಿರುವ ಆರೋಪಿಗಳಿಗೆ, ಮೈಸೂರು ಸಂಸದ ಪಾಸ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯೂ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ತಪಸ್ ರಾಯ್ ಲಲಿತ್ ಝಾ ಅವರೊಂದಿಗೆ ಇರುವ ಫೋಟೋವನ್ನು ಬಿಡುಗಡೆ ಮಾಡಿದೆ.
ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತೋ ಮಜುಂದಾರ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಪೋಟೋ ಪೋಸ್ಟ್ ಮಾಡಿದ್ದು, " ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲದ ಮೇಲಿನ ದಾಳಿಯ ಮಾಸ್ಟರ್ಮೈಂಡ್ ಲಲಿತ್ ಝಾ, ಟಿಎಂಸಿಯ ತಪಸ್ ರಾಯ್ ಅವರೊಂದಿಗೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿದ್ದಾರೆ. ಈ ಒಂದು ಸಾಕ್ಷಿ, ನಾಯಕನ ಕುತಂತ್ರದ ತನಿಖೆಗೆ ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.