ಹಾಸನ,ಡಿ 10 (DaijiworldNews/SK): ನಾನು 50-60 ಜನ ಕರೆದುಕೊಂಡು ಬರುತ್ತೀನಿ. ಏನು ತೊಂದರೆ ಆಗುವುದು ಬೇಡ ಅಂತ ಕೇಂದ್ರದ ನಾಯಕರ ಬಳಿ ಹೇಳಿರೋ ಮಾಹಿತಿ ಇದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿ, ಲೋಕಸಭಾ ಚುನಾವಣೆ ಕಳೆಯಲಿ, ಮಹಾರಾಷ್ಟ್ರದಲ್ಲಿ ನಡೀತಲ್ಲ ಆ ರೀತಿ ನಡೆಯುತ್ತೆ. ನಾನು 50-60 ಜನ ಕರ್ಕೊಂಡು ಬಂದು ಬಿಡ್ತೀನಿ . ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಅಂತ ಡಿಕೆಶಿ ದೆಹಲಿ ಭೇಟಿ ಬಗ್ಗೆ ಹೆಚ್ಡಿಕೆ ಹೊಸ ವರಸೆ ಶುರು ಮಾಡಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿರುವುದಕ್ಕೆ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು, ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಅನ್ನೋದು ಉಳಿದಿಲ್ಲ ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗ್ತಾರೆ ಅಷ್ಟೇ ಎಂದು ಹೇಳಿದ್ದಾರೆ.