ಮುಂಬೈ, ಡಿ 10 (DaijiworldNews/SK): ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 49 ವರ್ಷದ ಪುರುಷನಿಗೆ ನ್ಯಾಯಾಲಯ ಒಂದು ದಿನದ ಜೈಲು ಶಿಕ್ಷೆ ವಿಧಿಸಿದ್ದು, ಡಿಸೆಂಬರ್ 4 ರ ಆದೇಶದಲ್ಲಿ, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬಿ.ಕೆ. ಗವಾಂಡೆ ಅವರು ಅಪರಾಧ ಸ್ವಭಾವ ಘೋರ ಎಂದಿದ್ದಾರೆ.
2019 ರ ಆ. 13 ರಂದು ಉಪನಗರ ಲೋಕಲ್ ನ ಪಶ್ಚಿಮ ರೈಲ್ವೆಯ ಸ್ಥಳೀಯ ರೈಲಿನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದಾಗ, ಆರೋಪಿ ಪದೇ ಪದೇ ಕಿರುಕುಳ ನೀಡುತ್ತಿದ್ದ.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ ಸಹೋದರ ಆರೋಪಿಯನ್ನು ಬಾಂದ್ರಾದಲ್ಲಿರುವ ರೈಲ್ವೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ನ್ಯಾಯಾಲಯ ಹಾಜರು ಪಡಿಸಿದ್ದರು.
ಇನ್ನು ಈ ಪ್ರಕರಣದಲ್ಲಿ ನಿರಂತ 5 ವರ್ಷ ವಿಚಾರ ನಡೆಸಿದ ನ್ಯಾಯಲಯವು ಡಿಸೆಂಬರ್ 4 ರಂದು ತೀರ್ಪು ನೀಡಿದ್ದು, ಒಂದು ದಿನದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.