ನವದೆಹಲಿ, ಡಿ 08 (DaijiworldNews/PC): ಸಾಧಿಸಲೇ ಬೇಕೆಂಬ ಹಠ ಮತ್ತು ಛಲ ಇದ್ದರೆ ಜೀವನದಲ್ಲಿ ಬರುವ ಯಾವುದೇ ಕಷ್ಟಗಳು ತೃಣಕ್ಕೆ ಸಮನಾಗುತ್ತದೆ. ತನ್ನ ಪರೀಕ್ಷೆ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡರೂ ಛಲದಿಂದ ಹಾಗೂ ತಂದೆಯ ಪ್ರೋತ್ಸಾಹದಿಂದ ಐಎಎಸ್ ಅಧಿಕಾರಿಯಾದ ಸ್ಪೂರ್ತಿದಾಯಕ ಕಥೆ ಅಂಕಿತಾ ಚೌಧರಿಯವರದ್ದು.
ಹೌದು ಇವರ ಹೆಸರು ಅಂಕಿತಾ ಚೌಧರಿ ಇವರು ಐಎಎಸ್ ಅಧಿಕಾರಿಯಾಗಲು ಬಯಸಿದ್ದು ಪರೀಕ್ಷೆಗೆ ತಯಾರಿಯನ್ನು ನಡೆಸುವ ಸಂದರ್ಭದಲ್ಲಿ ತನ್ನ ತಾಯಿಯನ್ನ ಕಳೆದುಕೊಂಡರು. ಆದರೆ ಅವರ ಸಾಧಿಸಲೇಬೇಕೆಂಬ ಛಲದಿಂದ ಅವರು ಕಂಡ ಕನಸು ನನಸು ಮಾಡಿಕೊಂಡರು.
ಅಂಕಿತಾ ಚೌದರಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರ ತಂದೆ ಸಕ್ಕರೆ ಕಾರ್ಖಾನೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣವನ್ನು ಪಡೆಯಲು ಅವರಿಗೆ ಬೆಂಬಲ ನೀಡಿದರು.
ಇವರು ದೆಹಲಿಯ ಹಿಂದೂ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ಕಾಲೇಜು ಓದುತ್ತಿರುವಾಗಲೇ ಐಎಎಸ್ ಅಧಿಕಾರಿಯಾಗಬೇಕು ಎಂದುಕೊಂಡಿದ್ದರು. ಬಳಿಕ ಐಐಟಿ ದೆಹಲಿಯಲ್ಲಿ ತನ್ನ ಸ್ನಾತಕೋತ್ತರ ಅಧ್ಯಯನದ ಜೊತೆಗೆ, ಅಂಕಿತಾ ಕಠಿಣವಾದ UPSC ಪರೀಕ್ಷೆಯನ್ನು ಬರೆಯಲು ಸಿದ್ಧತೆಗಳನ್ನು ಪ್ರಾರಂಭಿಸಿದರು.
2017 ರಲ್ಲಿ UPSC ನಲ್ಲಿ ಅವರ ಮೊದಲ ಪ್ರಯತ್ನ ಮಾಡಿದ್ದು ಅದು ಫಲಿಸಲಿಲ್ಲ. ಬಳಿಕ ಅವಳು ಎರಡನೇ ಬಾರಿಗೆ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದರು. ಆದರೆ ಅದೇ ಸಮಯದಲ್ಲಿ ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡರು ಅದೇ ನೋವಿನ ಮಡುವಿನಲ್ಲಿ ಅವರಿದ್ದರು. ಆದರೆ ಆಕೆಯ ತಂದೆ ಸತ್ಯವಾನ್ ಅವರ ಗುರಿಯನ್ನು ಸಾಧಿಸಲು ಗಮನಹರಿಸುವಂತೆ ಪ್ರೇರೇಪಿಸಿದರು.
2018 ರಲ್ಲಿ, ಅಂಕಿತಾ ತನ್ನ ತಂದೆಯ ಪ್ರೇರಣೆಯಿಂದ UPSC ಪರೀಕ್ಷೆ ಯಲ್ಲಿ ತನ್ನ ಎರಡನೇ ಪ್ರಯತ್ನವನ್ನು ಮಾಡಿದರು ಎರಡನೇ ಪರೀಕ್ಷೆಯಲ್ಲಿ 14 ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಆಕೆಯ ಕನಸನ್ನು ನನಸು ಮಾಡಿಕೊಂಡರು.