ಐಜ್ವಾಲ್, ಡಿ 06 (DaijiworldNews/AA): ಭಾರತದ ಮೊದಲ ಮಹಿಳಾ ಸಹಾಯಕ ಡಿ ಕ್ಯಾಂಪ್ ಆಗಿ 2015ರ ಬ್ಯಾಚ್ ನ ಭಾರತೀಯ ವಾಯುಪಡೆಯ ಅಧಿಕಾರಿ ಮನಿಶಾ ಪಾಧಿ ಅವರು ನೇಮಕಗೊಂಡಿದ್ದಾರೆ.
ಮಿಜೋರಾಂ ರಾಜ್ಯಪಾಲ ಡಾ.ಹರಿಬಾಬು ಕಂಬಂಪತಿ ಅವರ ಸಹಾಯಕ ಡಿ ಕ್ಯಾಂಪ್ ಆಗಿ ಮನಿಶಾ ಪಾಧಿ ನೇಮಕಗೊಂಡಿದ್ದಾರೆ. ಈ ಮೂಲಕ ಸಹಾಯಕ ಡಿ ಕ್ಯಾಂಪ್ ಆಗಿ ನೇಮಕಗೊಂಡ ಮೊದಲ ಮಹಿಳಾ ಭಾರತೀಯ ಸಶಸ್ತ್ರ ಪಡೆ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮಿಜೋರಾಂ ರಾಜ್ಯಪಾಲ ಡಾ.ಹರಿಬಾಬು ಕಂಬಂಪತಿ ಅವರು ನ. 29 ರಂದು ರಾಜ್ಯದ ರಾಜಧಾನಿ ಐಜ್ವಾಲ್ ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಎಡಿಸಿಯಾಗಿ ಸ್ಕ್ವಾಡ್ರನ್ ಲೀಡರ್ ಮನಿಶಾ ಪಾಧಿ ಅವರನ್ನು ನೇಮಿಸಿದರು. ಬಳಿಕ ನ. 29 ರಂದು ರಾಜ್ಯಪಾಲರಿಗೆ ವರದಿ ಮಾಡುವ ಮೂಲಕ ಎಡಿಸಿಯಾಗಿ ವರದಿ ಮಾಡುವ ಮುಖಾಂತರ ಎಡಿಸಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ಒಡಿಶಾದ ಗಂಜಾಂ ಜಿಲ್ಲೆಯ ಬರ್ಹಾಂಪುರದವರಾದ ಮನಿಶಾ ಪಾಧಿ ಅವರ್ ಈ ಸಾಧನೆಗೆ ಇಡೀ ಊರೇ ಸಂಭ್ರಮಿಸಿದೆ. ಇನ್ನು ಮನಿಶಾ ಅವರು ಇದಕ್ಕೂ ಮೊದಲು ವಾಯುಪಡೆ, ಪುಣೆ, ಬೀದರ್ ಹಾಗೂ ಭಟಿಂಡಾದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.