ನವದೆಹಲಿ, ಡಿ 05 (DaijiworldNews/RA): ಮರಳಿ ಯತ್ನವ ಮಾಡು ಎನ್ನುವ ಶ್ರಮ ಎಲ್ಲಿಯ ತನಕ ಎಂದರೆ ಯಶಸ್ಸು ಕಾಣುವವರೆಗೆ..ತಪ್ಪುಗಳು ಮತ್ತು ವೈಫಲ್ಯಗಳಿಂದ ಕುಗ್ಗದೇ ಅದನ್ನೇ ಸಾಧನೆಯ ಮೆಟ್ಟಿಲಾಗಿಸಿದವರು ವಿಜಯ ವರ್ಧನ್.ಯುಪಿಎಸ್ಸಿ ಪರೀಕ್ಷೆಯನ್ನು 35ನೇ ಪ್ರಯತ್ನದಲ್ಲಿ ಪಾಸ್ ಮಾಡುವ ಮೂಲಕ ಸಾಧನೆಗೆ ಅಸಾಧ್ಯವಾದದ್ದು ಯಾವುದು ಅಲ್ಲ ಎಂಬುವುದನ್ನು ತೋರಿಸಿಕೊಟ್ಟು, ಪ್ರಯತ್ನಿಸಿ ಸೋತು ನಿರಾಶರಾದ ಹಲವು ಯುವ ಮನಸ್ಸುಗಳಿಗೆ ಮಾದರಿಯಾಗಿದ್ದಾರೆ.
ಯುಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬಹಳ ಪ್ರಯತ್ನ ಪಟ್ಟ ಪಾಸ್ ಮಾಡಿರುವ ಇವರು ಸಿಎಸ್ಇ ಮತ್ತು ಐಪಿಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗುವುದಕ್ಕೆ ಈಗ ತರಬೇತಿಯನ್ನು ಪಡೆದುಕೊಳ್ಳುತಿದ್ದಾರೆ.ವಿಜಯ ವರ್ಧನ್ ಅವರು ಸಿರ್ಸಾದಲ್ಲಿ ಪ್ರಾಥಮಿಕ ಅಧ್ಯಯನ ಮಾಡಿದ ನಂತರ ಹಿಸ್ಸಾರ್ನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಪೂರ್ಣಗೊಳಿಸಿದರು. ನಂತರ ದೆಹಲಿಗೆ ತೆರಳಿ ಪಿಸಿಎಸ್, ಯುಪಿಎಸ್ಸಿ, ಎಸ್ಎಸ್ಸಿ ಮತ್ತು ಸಿಜಿಎಲ್ ಸೇರಿದಂತೆ 30 ಪರೀಕ್ಷೆಗಳನ್ನು ಬರೆದರು. ಆದಾಗ್ಯೂ, ಅವರು ಎಲ್ಲದರಲ್ಲೂ ವಿಫಲರಾದರು.
ಐಎಎಸ್ ವಿಜಯ್ ವರ್ಧನ್ ತಮ್ಮ ತಪ್ಪುಗಳಿಂದ ಕಲಿತು ಪ್ರತಿ ವೈಫಲ್ಯದ ನಂತರ ಹೆಚ್ಚು ಶ್ರಮಿಸಿದರು. ನಂತರ ಅವರು ಸತತ ನಾಲ್ಕು ಬಾರಿ ವಿಫಲರಾದರು. 2018 ರಲ್ಲಿ, ಅವರ ಪ್ರಯತ್ನಗಳು ಫಲ ನೀಡಿ AIR 104 ಅನ್ನು ಪಡೆದುಕೊಂಡರು ಆದರೆ IPS ಅಧಿಕಾರಿಯ ಹುದ್ದೆಯನ್ನು ಪಡೆದರು. ಆದ್ರೆ ಇದಕ್ಕ್ರ್ ತೃಪ್ತಿಗೊಳ್ಳದ ಅವರು 2021 ರಲ್ಲಿ UPSC ಪರೀಕ್ಷೆಯಲ್ಲಿ ಮತ್ತೆ ಎದುರಿಸಿ IAS ಸಾಧಿಸಿದರು.