ಕೊಚ್ಚಿ, ಡಿ 3 (DaijiworldNews/SK): ಕೇರಳದ ಕಲಮಸ್ಸೆರಿಯ ಝಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಅಕ್ಟೋಬರ್ 29 ರಂದು ಪ್ರಾರ್ಥನಾ ನಡೆಯುತ್ತಿದ್ದ ವೇಳೆ ಸ್ಟೋಟ ಒಂದು ಸಂಭವಿಸಿತ್ತು. ಈ ಪ್ರಾರ್ಥನಾ ಸಭೆಯಲ್ಲಿ 2,000 ಕ್ಕೂ ಹೆಚ್ಚು ಮಂದಿ ಸೇರಿದ್ದು, ಆ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡು, ಕೆಲವು ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗಾ 78 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಮೃತರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೊಡುಪುಳ ವಂದಮಟ್ಟಂ ಕುಲಂಗರತೊಟ್ಟಿಯಿಲ್ ನಿವಾಸಿ ಕೆ.ಎ.ಜೋನಾ ಎಂದು ಗುರುತಿಸಲಾಗಿದೆ.
ಇದೇ ಸ್ಫೋಟದಲ್ಲಿ ಗಾಯಗೊಂಡಿರುವ ಜೋನಾ ಅವರ ಪತ್ನಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಈ ಸ್ಟೋಟಕ್ಕೆ ಕಾರಣವಾಗಿರುವ ಆರೋಪಿ ಡೊಮಿನಿಕ್ ಮಾರ್ಟಿನ್ ನನ್ನು ಕೇರಳ ಕೋರ್ಟ್ ಡಿ. 26 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.