ನವದೆಹಲಿ, ಡಿ 03 (DaijiworldNews/MS): ಪಂಚ ರಾಜ್ಯಗಳ ಪೈಕಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದ್ದು ಮೊದಲು ಅಧಿಕಾರಿಗಳು ಅಂಚೆ ಮತ ಎಣಿಕೆ ನಡೆಸಲಿದ್ದಾರೆ.
ಇಂದು ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಮಾತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಮಾತ್ರ ಹೊರಬೀಳಲಿದ್ದು, ನಾಳೆ ಮಿಜೋರಾಂ ರಾಜ್ಯದಲ್ಲಿ ಮತಗಳ ಎಣಿಕೆ ನಡೆಯಲಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು ಬಿಗಿ ಭದ್ರತೆಯಲ್ಲಿ ಮತ ಎಣಿಕೆ ಆರಂಭವಾಗಿದೆ. ಮತ ಎಣಿಕೆ ಆರಂಭಗೊಂಡಿದ್ದು , ಮಧ್ಯ ಪ್ರದೇಶ ಹಾಗೂರಾಜಸ್ಥಾ ನದಲ್ಲಿ ನಿಕಟ ಪೈಪೋಟಿ ಕಂಡುಬಂದಿದೆ. ಆರಂಭಿಕ ಟ್ರೆಂಡ್ ಪ್ರಕಾರಮಧ್ಯ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ 18 ಹಾಗೂ ಬಿಜೆಪಿ 16 ಕ್ಷೇತ್ರ ಗಳಲ್ಲಿ ಮುನ್ನಡೆ ಪಡೆದಿವೆ.