ನವದೆಹಲಿ,ಏ17(Daijiworld News/AZM):ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ ಇಂದು ರಾತ್ರಿಯಿಂದಲೇ ತಾತ್ಕಾಲಿಕವಾಗಿ ತನ್ನ ಎಲ್ಲಾ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನಲೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಜೆಟ್ ಏರ್ವೇಸ್ನ ವಿಮಾನ ಸೇವೆಗಳಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಜೆಟ್ ಏರ್ವೇಸ್ ಸಂಸ್ಥೆ ಎಸ್ಬಿಐ ನೇತೃತ್ವದಲ್ಲಿನ 26 ಬ್ಯಾಂಕ್ಗಳ ಒಕ್ಕೂಟದಿಂದ ತುರ್ತು ಹಣಕಾಸು ನೆರವು ಕೋರಿತ್ತು. ತುರ್ತಾಗಿ ₹ 400 ಕೋಟಿ ನೀಡುವಂತೆ ಮನವಿ ಮಾಡಿತ್ತು.
ಆದರೆ ಎಸ್ಬಿಐ ನೇತೃತ್ವದಲ್ಲಿನ ಬ್ಯಾಂಕ್ಗಳು ತುರ್ತಾಗಿ ₹400 ಕೋಟಿ ನೀಡಲು ನಿರಾಕರಿಸಿರುವುದರಿಂದ ಜೆಟ್ ಏರ್ವೇಸ್ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಇಂದು ರಾತ್ರಿಯಿಂದ ನಿಲ್ಲಿಸಲಿದೆ.