ಭದ್ರಾವತಿ,ಏ17(Daijiworld News/AZM):ಸಚಿವ ಡಿಕೆಶಿ ಬಳಿ ಡೈರಿ ಬಹಿರಂಗಪಡಿಸದಂತೆ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು ಎನ್ನುವ ಹೇಳಿಕೆಯ ಮೂಲಕ ಚುನಾವಣಾ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿಯವರು ಹೊಸ ಬಾಂಬ್ ಸಿಡಿಸಿದ್ದಾರೆ.
ಶಿಕಾರಿಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಅವರು ಈ ಕುರಿತು ಮಾತನಾಡಿದ್ದಾರೆ. ಬಿಜೆಪಿ ನಾಯಕರು ಸಚಿವ ಡಿಕೆಶಿಯವರನ್ನು ಭೇಟಿಯಾಗಲು ಹೋಗಿದ್ದು, ನೀರಾವರಿ ವಿಷಯದ ಕುರಿತು ಮಾತನಾಡಲು ಅಲ್ಲ. ಬದಲಾಗಿ ಡೈರಿಯನ್ನು ಬಹಿರಂಗಪಡಿಸಬೇಡಿ ಎಂದು ಹೇಳಲು ಹೋಗಿರುವುದು ಎಂದು ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.