ಡೆಹ್ರಾಡೂನ್, ನ 28 (DaijiworldNews/HR): ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಎನ್ಡಿಆರ್ಎಫ್ ತಂಡವು ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಿದ್ದು, ಅವರನ್ನು ಕರೆದೊಯ್ಯಲು ಚಿನುಕೂ ಹೆಲಿಕಾಪ್ಟರ್ ಏರ್ ಲಿಪ್ಟ್ ಗೆ ಸಜ್ಜಾಗಿದ್ದು, ಇತ್ತ ಕಾರ್ಮಿಕರನ್ನು ಹೊರತೆಗೆಯುವ ಮೊದಲು ವೈದ್ಯಕೀಯ ತಪಾಸಣೆಗಾಗಿ ಸುರಂಗದೊಳಗೆ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಿದೆ.
ರಕ್ಷಣಾ ಕಾರ್ಯದ ವೇಳೆ ಯಂತ್ರಗಳು ಕೈಕೊಟ್ಟಿದ್ದರಿಂದ ಕಾರ್ಯಾಚರಣೆ ವಿಳಂಬವಾಗಿದ್ದು, ಕೊನೆಗೆ ರ್ಯಾಟ್ ಹೋಲ್ ಮೈನಿಂಗ್ ಮೂಲಕ 41 ಜನರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.
ಇನ್ನು 41 ಕಾರ್ಮಿಕರು ಸುಮಾರು 17 ದಿನಗಳಿಂದ ಸುರಂಗದಲ್ಲಿ ಇದ್ದು, ಅಂದಿನಿಂದ ಇಂದಿನ ವರೆಗೆ ದಿನಪ್ರತಿ ರಕ್ಷಣಾ ಕಾರ್ಯ ಮುಂದುವರೆದಿತ್ತು.