ಬೆಂಗಳೂರು, ನ 27 (DaijiworldNews/HR): ಬಿಎಂಎಸ್ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ ಯಲಹಂಕ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. 54 ವಿದ್ಯಾರ್ಥಿಗಳಿಗೆ ಎಂಸಿಎ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಲ್ ಹೆಚ್. ಎಸ್. ಶಂಕರ್, ಭಾರತ ಸರ್ಕಾರದ ವಿಶಿಷ್ಟ ಸೇವಾ ಪದಕ ಪುರಸ್ಕೃತರು ನೂತನ ಪದವೀದರರನ್ನುದ್ದೇಶಿಸಿ ಮಾತನಾಡಿ, ಕಾರ್ಯಕ್ಷೇತ್ರ ಯಾವುದೇ ಆದರೂ ಸಮಾಜಕ್ಕೆ, ದೇಶಕ್ಕೆ ಅನುಕೂಲ ಆಗುವಂತೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವಿಫುಲ ಅವಕಾಶಗಳು ದೊರೆಯುತ್ತವೆ ಎಂದರು.
ಪ್ರಾಂಶುಪಾಲ ಡಾ. ಮೋಹನ್ ಬಾಬು ಜಿ. ಎನ್. ಕಾಲೇಜಿನ ಕಿರು ಪರಿಚಯ ಮಾಡಿಕೊಟ್ಟರು. ಪ್ರರಿಭಾವಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಸಂಸ್ಥೆಯ ಕೀರ್ತಿ ಹೆಚ್ಚಾಗಿದೆ ಎಂದರು.
ಕಾಲೇಜಿನ ಅಧ್ಯಕ್ಷರಾದ ಅವಿರಾಮ್ ಶರ್ಮ ಮಾತನಾಡಿ, 2023 ಸಾಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಪದವಿಯನ್ನು ಪಡೆದಿದ್ದಾರೆ. ಇದರ ಹಿಂದೆ ಶಿಕ್ಷಕರ, ಶಿಕ್ಷಕೇತರರ ಶ್ರಮ ಬಹಳಷ್ಟಿದೆ ಎಂದರು. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಗಳು ಲಭಿಸಿದ್ದು ಉತ್ತಮ ಸಾಧನೆಗೈದು ಕಾಲೇಜಿನ ಮತ್ತು ದೇಶದ ಕೀರ್ತಿಯನ್ನು ಬೆಳಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ 6 ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಫ್ರಾಂಕ್ಲಿನ್ ದಲ್ಮೆಟ್ ಚಿನ್ನದ ಪದಕ, ಜ್ಯೋಸ್ತ್ನಾ ಎಂ. ಹೆಚ್. ಬೆಳ್ಳಿ ಪದಕ, ಅಮೃತಾ ಎಲ್ ಕಂಚಿನ ಪದಕ ಪಡೆದುಕೊಂಡರು. ಒಟ್ಟು 54 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.
ಕರ್ನಲ್ ಎಚ್ಎಸ್ ಶಂಕರ್, ವಿಶಿಷ್ಟ ಸೇವಾ ಪದಕ ವಿಜೇತರು, BMSIT ಅಧ್ಯಕ್ಷರು, ಪ್ರಾಂಶುಪಾಲ ಡಾ.ಮೋಹನ್ ಬಾಬು ಜಿ ಎನ್, ಡಾ ಅನಿಲ್ ಜಿಎನ್, ಡಾ. ಅಂಬಿಕಾ ಆರ್, ಡಾ. ಗಣೇಶ್ ಪಿ, ಡಾ. ಹನುಮಂತರಾಜು ಮತ್ತಿತರರು ಹಾಜರಿದ್ದರು.